ಪ್ರಮುಖ ಸುದ್ದಿಮೈಸೂರು

ಮೃಗಾಲಯಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ : 5ವರ್ಷದ ಹೆಣ್ಣಾನೆಯನ್ನು ದತ್ತು ಪಡೆದ ಸಚಿವರು

ಮೈಸೂರು, ಏ.22:-  ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯಕ್ಕೆ ಇಂದು  ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಮತ್ತು ಸ್ಥಳೀಯ ಶಾಸಕರಾದ ರಾಮದಾಸ್ ಅವರ ಜೊತೆಗೂಡಿ ಭೇಟಿ ನೀಡಿ ಪರಿಶೀಲಿಸಿದರು.

ಪ್ರಾಣಿ-ಪಕ್ಷಿಗಳಿಗೆ ಕೊರೋನಾ ಹಿನ್ನೆಲೆಯಲ್ಲಿ ಕೈಗೊಡಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಆಹಾರ ಕುಡಿಯುವ ನೀರು ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಮೈಸೂರು ಮೃಗಾಲಯದಲ್ಲಿರುವ ಚಾಮುಂಡಿ ಎಂಬ 5 ವರ್ಷದ ಹೆಣ್ಣಾನೆಯನ್ನು    ಸಚಿವ  ಎಸ್.ಟಿ.ಸೋಮಶೇಖರ್ ಅವರು 1 ಲಕ್ಷ 75 ಸಾವಿರ ರೂಪಾಯಿ ವೈಯುಕ್ತಿಕ ನೆರವನ್ನು ನೀಡುವ ಮೂಲಕ 1 ವರ್ಷಕ್ಕೆ ದತ್ತು ಪಡೆದರು.

16 ಹುಲಿಗಳಿಗೆ ಮಾಂಸಾಹಾರ ನೀಡಲು ಒಂದು ದಿನದ ವೆಚ್ಚವಾದ 25 ಸಾವಿರ ರೂಪಾಯಿಯನ್ನು ವೈಯುಕ್ತಿಕವಾಗಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: