ಮೈಸೂರು

ಬಿ .ವೈ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಸಸಿ ನೆಡುವ ಮೂಲಕ ವಿಶ್ವ ಭೂ ದಿನಾಚರಣೆ

ಮೈಸೂರು,ಏ.22:- ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ  ಕಾರ್ಯದರ್ಶಿ ಹಾಗೂ ಸಿಎಂ ಪುತ್ರರಾದ ಬಿ .ವೈ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಇಂದು  ಜಯನಗರದಲ್ಲಿರುವ ನೂತನ ನ್ಯಾಯಾಲಯ ಮುಂಭಾಗ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ವಿಶ್ವ ಭೂ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಸಿ ನೆಟ್ಟ ನಂತರ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಲ್ ಆರ್ ಮಹಾದೇವಸ್ವಾಮಿ ವಿಶ್ವದ ಉಳಿವಿಗೆ ಪರಿಸರ ಕಾಪಾಡಿ. ಪರಿಸರದ ಸಮತೋಲನವನ್ನು ಕಾಪಾಡಿದರೆ ಮಾತ್ರ ವಿಶ್ವ ಉಳಿಯಲು ಸಾಧ್ಯ, ಇಲ್ಲದಿದ್ದರೆ ಭಯಂಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ  ಆತಂಕ ವ್ಯಕ್ತಪಡಿಸಿದರು.

ಮಾನವನ ದುರಾಸೆಯಿಂದ ಗಿಡ ಮರಗಳನ್ನು ಕಡಿಯುವ ಮೂಲಕ ಪರಿಸರವನ್ನು ನಾಶಪಡಿಸುತ್ತಿದ್ದೇವೆ. ಭೂಮಿಯ ಒಡಲನ್ನು ಬರಿದು ಮಾಡಿ ನಿರುಪಯುಕ್ತ ಮಾಡಲಾಗುತ್ತಿದೆ. ರಾಸಾಯನಿಕಗಳನ್ನು ಯಥೇಚ್ಛವಾಗಿ ಭೂಮಿಗೆ ಹಾಕುವುದರ ಮೂಲಕ ಭೂಮಿ ಬರಡಾಗುತ್ತಿದೆ.

ಹೆಚ್ಚಿನ ಇಳುವರಿ ಮತ್ತು ಅಧಿಕ ಲಾಭದ ಆಸೆಯಿಂದ ಬೆಳೆಗಳನ್ನು ಬೆಳೆಯುವುದರಲ್ಲೂ ಸಮತೋಲನವನ್ನು ಕಾಪಾಡುತ್ತಿಲ್ಲ. ಸಾವಯವ ಗೊಬ್ಬರಗಳನ್ನು ಭೂಮಿಗೆ ನೀಡುತ್ತಿಲ್ಲ. ಹೀಗೆ ಮುಂದುವರೆದರೆ ಭೂಮಿಯು ನಿರುಪಯುಕ್ತವಾಗುತ್ತದೆ ಎಂದು ಎಚ್ಚರಿಸಿದರು.

ಭೂಮಿಯನ್ನು ಹಿತಮಿತವಾಗಿ ಬಳಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಸಾವಯವ ಗೊಬ್ಬರಗಳನ್ನು ಬಳಸಬೇಕು ಎಂದರು.

ನಂತರ ಮಾತನಾಡಿದ ಬಿಜೆಪಿ ಮಹಿಳಾ ಮುಖಂಡರಾದ   ಲಕ್ಷ್ಮಿದೇವಿ  ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳದೇ ಇದ್ದಲ್ಲಿ ಭೂಮಿಯು ಅಳಿವಿನಂಚಿಗೆ ತಲುಪುವುದರಲ್ಲಿ ಅನುಮಾನವೇ ಬೇಡ. ಈಗಾಗಲೇ ಭೂಮಿಯ ಮೇಲ್ಪದರ ಹಾಗೂ ನೀರಿನ ಮೂಲಗಳಲ್ಲಿ ಪ್ಲಾಸ್ಟಿಕ್‌  ಸೇರಿಹೋಗಿದೆ. ಸಮುದ್ರದಲ್ಲಿ  80 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವಿದೆ. ಇದರಿಂದ ಲಕ್ಷಾಂತರ ಜಲಚರಗಳು ಮೃತಪಟ್ಟಿವೆ. ಜೀವ ಸಂಕುಲಕ್ಕೆ ಹಾನಿ ಎಸಗುವ ಹಕ್ಕು ಮಾನವನಿಗೆ ಇಲ್ಲ. ಮಾನವನ ಆಧುನೀಕರಣದ ಹಿಂದಿನ ಓಟದಿಂದಾಗಿ ಈಗಾಗಲೇ 10 ಸಾವಿರ ಪ್ರಭೇದದ ಜೀವಿಗಳು ನಾಶವಾಗಿವೆ. ಧ್ರುವ ಭಾಗಗಳಲ್ಲಿರುವ ಮಂಜು ಕರಗಿ ಭೂಭಾಗ ಮುಳುಗಲು ಶುರುವಾಗಿದೆ ಎಂದು   ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭ  ಬೇಕರಿ ಮಾಲೀಕರಾದ ಆನಂದ್, ವಕೀಲರಾದ ಪ್ರಸನ್ನ .ಅಪೂರ್ವ  ಹೋಟೆಲ್ ಮಾಲೀಕರಾದ ಸುರೇಶ್ .ನಿಖಿಲ್ ಜಸ್ವಂತ್ .ವಿಕ್ರಂ ಅಯ್ಯಂಗಾರ್ ಅಶೋಕ್ .ಸತೀಶ್ .ಅರಸೀಕೆರೆ ಉಮೇಶ್ .ಹರೀಶ್ ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: