ಮೈಸೂರು

ಎರಡು ಪ್ರತ್ಯೇಕ ಪ್ರಕರಣ : ಲಾಕ್ ಡೌನ್ ಇದ್ದರೂ ಬೀಡಿ, ಸಿಗರೇಟು ಮಾರಾಟ : ಇಬ್ಬರ ಬಂಧನ

ಮೈಸೂರು,ಏ.23:- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಾಕ್ ಡೌನ್ ಇದ್ದರೂ ಬೀಡಿ, ಸಿಗರೇಟು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ದೂರು ದಾಖಲಿಸಿಕೊಳ್ಳಲಾಗಿದೆ.

ಬಂಧಿತರನ್ನು ಮೊಹಮ್ಮದ್ ನೂರುಲ್ಲಾ ಹಾಗೂ ಅಶೋಕ್ ಎಂದು ಗುರುತಿಸಲಾಗಿದೆ. ಕೆ.ಆರ್.ವೃತ್ತದ ಕಳಿಂಗ ಬಾರ್ ಗಲ್ಲಿಯ ಎಸ್.ಕೆ.ಏಜೆನ್ಸೀಸ್ ಅಂಗಡಿ ಮಾಲೀಕ ಮೊಹಮ್ಮದ್ ನೂರುಲ್ಲಾ ತಮ್ಮ ಅಂಗಡಿಯಲ್ಲಿ ಬೀಡಿ ಮತ್ತು ಸಿಗರೇಟು ಪ್ಯಾಕ್ ನ್ನು ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ವ್ಯಾಪಾರ ಮಾಡುತ್ತಿದ್ದರೆನ್ನಲಾಗಿದೆ.  ಗಸ್ತಿನಲ್ಲಿದ್ದ ಸಬ್ ಇನ್ಸಪೆಕ್ಟರ್ ರಾಜು ಅವರು ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಬಂಧಿಸಿ ದೂರು ದಾಖಲಿಸಿಕೊಂಡಿದ್ದಾರೆ.

ದೇವರಾಜ ಮೊಹಲ್ಲಾದ ಹಳೆ ಸಂತೆಪೇಟೆಯ ಡುಪ್ಲಿನ್ ಕಾಂಪ್ಲೆಕ್ಸ್ ನ ಪಕ್ಕದಲ್ಲಿರುವ ಅಧೀಶ್ವರ ಎಂಟರ್ ಪ್ರೈಸಸ್ ಅಂಗಡಿ ಮಾಲೀಕ ಅಶೋಕ್  ತಮ್ಮ ಅಂಗಡಿಯ ಮುಂಭಾಗದ ಫುಟ್ ಪಾತ್ ನಲ್ಲಿ ಬೀಡಿ ಮತ್ತು ಸಿಗರೇಟ್ ಪ್ಯಾಕ್ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: