ಕರ್ನಾಟಕಪ್ರಮುಖ ಸುದ್ದಿ

ಅಕ್ಕಿಗಿರಣಿ ಮಾಲಿಕರಿಂದ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಹಸ್ತ

ಮಂಡ್ಯ (ಏ.23): ಸಂಧಿಗ್ಧ ಸಂದರ್ಭದಲ್ಲಿ ಕಷ್ಟದ ದಿವಸಗಳಲ್ಲಿ ಸಂಘಸಂಸ್ಥೆಗಳು, ಅಕ್ಕಿ ಗಿರಣಿ ಮಾಲಿಕರು ಮುಂದೆ ಬಂದು ಬಡವರಿಗೆ, ನಿರ್ಗತಿಕರಿಗೆ, ಮುಖ್ಯವಾಹಿನಿಯಿಂದ ದೂರವಿರುವವರಿಗೆ ಸಹಾಯ ಅದರಲ್ಲೂ ಕೂಡ ಅಕ್ಕಿಯನ್ನ ನೀಡಿ ದಾಸೋಹ ಮಾಡಬೇಕು ಎಂದು ಬಂದಿರುವುದು ಅತ್ಯಂತ ಶ್ಲಾಘನೀಯ ಕೆಲಸ ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದ್ದಾರೆ.

ಇಂದು ಮಾಲಿಕರ ಸಂಘದ ವತಿಯಿಂದ 10 ಕೆಜಿ ಇರುವಂತಹ ಒಂದು ಸಾವಿರ ಅಕ್ಕಿ ಚೀಲವನ್ನು ಜಿಲ್ಲಾಡಳಿತಕ್ಕೆ ಕೊಟ್ಟ ಸಂದರ್ಭದಲ್ಲಿ ಮಾತನಾಡಿದ ಅವರು ಇಡೀ ವಿಶ್ವದಾದ್ಯಂತ ಕೊರೋನಾ ಮಹಾಮಾರಿ ಸೋಂಕು ಬಂದಿದ್ದು, ಈ ಸಂದರ್ಭದಲ್ಲಿ ಲಕ್ಷಾಂತರ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ಕೊರೋನಾ ಇರುವಂತಹ ಮಳವಳ್ಳಿ ತಾಲ್ಲೂಕು ಹಾಗೂ ಸಮಸ್ಯೆ ಇರುವಂತಹ ಇತರ ಎಲ್ಲಾ ತಾಲ್ಲೂಕುಗಳಲ್ಲಿ ಯಾರಿಗೆ ಪಡಿತರ ದೊರೆತಿರುವುದಿಲ್ಲ, ನಿರ್ಗತಿಕರಿದ್ದಾರೆ ಹಾಗೂ ಯಾರಿಗೆ ಅಕ್ಕಿ ದೊರೆತಿರುವುದಿಲ್ಲ ಅಂತಹವರಿಗೆ ಈ ಅಕ್ಕಿಯನ್ನು ಆಹಾರ ಇಲಾಖೆ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಮುಖಾಂತರ ಅತ್ಯಂತ ಪಾರದರ್ಶಕವಾಗಿ ವಿತರಣೆ ಮಾಡಲು ಎಲ್ಲಾ ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ಅವರು ಇಂತಹ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿರುವ ಎಲ್ಲಾ ಅಕ್ಕಿ ಗಿರಣಿ ಮಾಲಿಕರಿಗೆ, ಸಂಘದವರಿಗೆ ಅಭಿನಂದನೆ ತಿಳಿಸಿದರು. (ಎನ್.ಬಿ)

Leave a Reply

comments

Related Articles

error: