ಮೈಸೂರು

ನೋಟು ರದ್ಧತಿ ಅನುಕೂಲವಾಗಿಲ್ಲ : ಧನಂಜಯ್

ಮೈಸೂರಿನ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೈಗಾರಿಕೆಗಳ ಮೇಲೆ ನೋಟು ರದ್ಧತಿಯಿಂದಾದ ಪರಿಣಾಮ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

 ಕಾಲೇಜು ಸಭಾಂಗಣದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ಡಾ. ಬಿ. ನಾಗರಾಜು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಧನಂಜಯ್ ಮಾತನಾಡಿ ಮೋದಿ ಸರ್ಕಾರ ದೇಶದಲ್ಲಿರುವ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತೇನೆಂದು 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿತ್ತು. ಈ ನೋಟು ರದ್ಧತಿಯಿಂದ ಜನಸಾಮಾನ್ಯರು ಸಂಕಷ್ಟವನ್ನು ಇಂದಿಗೂ ಎದುರಿಸುತ್ತಿದ್ದಾರೆ. ಅದರ ಜೊತೆಗೆ ಕೈಗಾರಿಕೆಗಳ ಮೇಲೆಯೂ ಕೂಡ ನೋಟು  ರದ್ಧತಿ  ಪರಿಣಾಮ ಬೀರಿದೆ. ಈ ನೋಟು ರದ್ಧತಿಯಿಂದ ಯಾರೊಬ್ಬರಿಗೂ ಅನುಕೂಲವಾಗಿಲ್ಲ. ಸಾರ್ವಜನಿಕರು ಕೆಲಸವಿಲ್ಲದೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ ವೃಂದ,  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: