ಮೈಸೂರು

ಆಜಾದ್ ಹಿಂದೂ ಸೇನೆ, ಅಶೋಕಪುರಂ ಕಾನೂನು ವಿದ್ಯಾರ್ಥಿಗಳಿಂದ ನಿರಾಶ್ರಿತರಿಗೆ ಆಹಾರ ವಿತರಣೆ

ಮೈಸೂರು,ಏ.23-ಆಜಾದ್ ಹಿಂದೂ ಸೇನೆ ಮತ್ತು ಅಶೋಕಪುರಂ ಕಾನೂನು ವಿದ್ಯಾರ್ಥಿಗಳು ಇಂದು ಅಶೋಕಪುರಂನ ನಿರಾಶ್ರಿತರಿಗೆ, ಮೈಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 650 ಮಂದಿ ಬಡವರಿಗೆ ಆಹಾರವನ್ನು ವಿತರಿಸಿದರು.

ಸತತವಾಗಿ ಹದಿನಾಲ್ಕನೇ ದಿನದಿಂದ ಆಜಾದ್ ಹಿಂದೂ ಸೇನೆ ಮತ್ತು ಅಶೋಕಪುರಂ ಕಾನೂನು ವಿದ್ಯಾರ್ಥಿಗಳು ಬಡವರಿಗೆ ಆಹಾರ ವಿತರಿಸುತ್ತಿದ್ದಾರೆ.

ನಗರಪಾಲಿಕೆ ಸದಸ್ಯರಾದ ಪಲ್ಲವಿ @ ಬೇಗಂ ರವರು ಆಹಾರವನ್ನು ವಿತರಣೆ ಮಾಡಲು ಚಾಲನೆ ನೀಡಿದರು. ಆಜಾದ್ ಹಿಂದೂ ಸೇನೆಯ ಜಿಲ್ಲಾಧ್ಯಕ್ಷ ಜೆ.ಜಯಶಂಕರ್, ಮೈಸೂರು ರಾಜಸ್ವ ನಿರೀಕ್ಷಕ ಮಹೇಂದ್ರಕುಮಾರ್, ಕಾನೂನು ವಿದ್ಯಾರ್ಥಿ ಬಿ.ಆರ್.ಪರಂಜ್ಯೋತಿ, ಆಜಾದ್ ಹಿಂದೂ ಸೇನೆಯ ಚಾಮರಾಜನಗರ ಅಧ್ಯಕ್ಷ ಪೃಥ್ವಿರಾಜ್, ಅಶೋಕಪುರಂ ಮುಖಂಡ ರಾಜೇಶ್, ಶ್ರೀಧರ್, ಸುಮನ್, ಪ್ರಶಾಂತ್ ಭುಗತಗಳ್ಳಿ, ರವಿ, ಮಧು, ಜಯಂತ್, ನಿತಿನ್ ರಾವ್ ಇತರರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: