ಮೈಸೂರು

ಕಣ್ಣು ತೆರೆಸಿದ ಪುಡಿಯಾದ ಕನ್ನಡಕ : ಮ್ಯಾನ್ ಹೋಲ್ ದುರಸ್ತಿ

ಕೇವಲ ಪ್ರತಿಭಟನೆಗಳನ್ನು ನಡೆಸಿದರೆ ಅದು ಪ್ರತಿಭಟನೆ ಮಾಡಿದ ದಿನವಷ್ಟೇ ಕಾವು ಪಡೆದುಕೊಂಡಿರಲಿದೆ. ಮರುದಿನ ಅದರ ಪ್ರಭಾವ ಕಡಿಮೆಯಾಗಲಿದೆ. ಇದು ಸಂಬಂಧಪಟ್ಟವರ ಗಮನ ಸೆಳೆಯಲು ಸಾಧ್ಯವಿಲ್ಲ. ಅವರಿಗೆ ಕೃತಿಯ ಮೂಲಕವೇ ಚಾಟಿಯೇಟು ಬೀಸಬೇಕು ಎಂಬ ನಿಲುವಿನಲ್ಲಿ  ಕಲಾವಿದ ಬಾದಲ್ ನಂಜುಂಡಸ್ವಾಮಿ ಒಡೆದ ಕನ್ನಡಕವನ್ನು ಚಿತ್ರಿಸಿ ಮ್ಯಾನ್ ಹೋಲ್ ದುರಸ್ತಿಗೆ ಸಂಬಂಧಿಸಿದವರ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ  ಎಂಬ ಅರ್ಥ ಬರುವಂತೆ ಅಣುಕು ಚಿತ್ರವನ್ನು ರಚಿಸಿದ್ದರು.  ಈ ಕುರಿತು ಸಿಟಿಟುಡೆ ವರದಿಯನ್ನೂ ಮಾಡಿತ್ತು.  ಅಣುಕು ಚಿತ್ರ ರಚನೆ  ಪಾಲಿಕೆಯ ಕಣ್ಣು ತೆರೆಸಿದ್ದು ಶುಕ್ರವಾರ ಮ್ಯಾನ್ ಹೋಲ್ ದುರಸ್ತಿಯಾಗಿದೆ.

ಮೈಸೂರಿನ ಕುಕ್ಕರಹಳ್ಳಿಕೆರೆಯ ಏರಿಯಾದಲ್ಲಿನ  ಮ್ಯಾನ್ ಹೋಲೊಂದು  ಪದೇ ಪದೇ ಕೆಟ್ಟು ಹೋಗುತ್ತಿತ್ತು. ಕಳಪೆ ಕಾಮಗಾರಿ ನಡೆಸಲಾಗುತ್ತಿತ್ತೇ ವಿನಃ ಅದಕ್ಕೊಂದು ಭದ್ರ ಕಾಮಗಾರಿ ನಡೆಸಲಾಗಿರಲಿಲ್ಲ. ಇದರಿಂದ ಬೇಸತ್ತ ಅದೇ ಏರಿಯಾದ ಚಿತ್ರಕಲಾವಿದ ಬಾದಲ್ ಮ್ಯಾನ್ ಹೋಲ್ ನ್ನು  ಕನ್ನಡಕವಾಗಿ ರಚಿಸಿ ಅದರಲ್ಲಿ ಒಂದು ಕಡೆ ಪುಡಿಗೈದಿರುವ ಚಿತ್ರವನ್ನು ರಚಿಸಿ ಅಲ್ಲೇ ಪಕ್ಕದಲ್ಲಿ ಶಾಲಾ ವಿದ್ಯಾರ್ಥಿಗಳು ಸ್ವಚ್ಛಭಾರತ ಅಭಿಯಾನದಲ್ಲಿ ತೊಡಗಿರುವ ಅಣಕು ಚಿತ್ರವನ್ನು ಬರೆದಿದ್ದರು.  ಕನ್ನಡಕ ಪುಡಿಯಾಗಿರುವುದರಿಂದ ಅವ್ಯವಸ್ಥೆಗಳು ಕಾಣಿಸುತ್ತಿಲ್ಲವೇ ಎಂಬ ಟೀಕೆಯನ್ನು  ಈ ಚಿತ್ರ ವ್ಯಕ್ತಪಡಿಸಿತ್ತು.  ಕಲಾವಿದರ ಪ್ರಯತ್ನ ಕೊನೆಗೂ ಸಫಲವಾಗಿದ್ದು, ಶುಕ್ರವಾರ ಮೈಸೂರು ಮಹಾನಗರಪಾಲಿಕೆ ದುರಸ್ತಿ ಕಾರ್ಯ ನಡೆಸಿದೆ.

Leave a Reply

comments

Related Articles

error: