ಮೈಸೂರು

ಕೆಪಿಸಿಸಿ ಕೋವೀಡ್ ಟಾಸ್ಕ್ ಪೋರ್ಸ್ ಸಮಿತಿ ವತಿಯಿಂದ ವರನಟ ಡಾ.ರಾಜ್ ಕುಮಾರ್ ಗೆ ಗೌರವ ಸಮರ್ಪಣೆ

ಮೈಸೂರು,ಏ.23:- ಕನ್ನಡ ಕಲಾ ಲೋಕದ ಧೃವತಾರೆ, ಅಭಿಮಾನಿಗಳನ್ನು ದೇವರೆಂದು ಕರೆದ ವಿನಯದ ಮೇರು ನಟ, ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಹಿನ್ನೆಲೆ ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಡಾ.ರಾಜ್ ಕುಮಾರ್ ಅವರ ಪ್ರತಿಮೆಗೆ ಇಂದು ಕೆಪಿಸಿಸಿ ಕೋವಿಡ್ ಟಾಸ್ಕ್ ಪೋರ್ಸ್ ವತಿಯಿಂದ ಮಾಲಾರ್ಪಣೆ  ಮಾಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ  ಶ್ರೀನಾಥ್ ಬಾಬು ಬಳಗದ ವತಿಯಿಂದ ಉಚಿತ ಮಾಸ್ಕ್ ಹಾಗೂ  ಆಹಾರದ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ  ಹಾಗೂ ಕೆಪಿಸಿಸಿ ಕೋವಿಡ್ ಟಾಸ್ಕ್ ಫೋರ್ಸ್ ಸಂಚಾಲಕರಾದ    ಎಂ ಕೆ ಸೋಮಶೇಖರ್ ,ಸಮಾಜ ಸೇವಕರಾದ ಡಾ.ರಘುರಾಂ ವಾಜಪೇಯಿ ,ಕೃಷ್ಣರಾಜ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಶ್ರೀನಿವಾಸ್ ,ವಿಶ್ವ,ಹರೀಶ್    ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: