ಮೈಸೂರು

ಯೋಜನೆಗೂ ಮುನ್ನವೇ ಟ್ರಿಣ್ ಟ್ರಿಣ್ ಸೈಕಲ್ ಕಳುವು

ಟ್ರಿನ್ ಟ್ರಿಣ್ ಯೋಜನೆ ಜಾರಿಯಾಗುವ ಮುನ್ನವೇ ಎರಡು ಸೈಕಲ್‌ಗಳನ್ನು ಕಳ್ಳರು ಕದ್ದೊಯ್ದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್ ಮುಂಭಾಗ ಡಾಕಿಂಗ್ ಹಾಬ್‌ನಲ್ಲಿ ನಿಲ್ಲಿಸಿದ್ದ ಎರಡು ಸೈಕಲ್‌ಗಳನ್ನು ಕಳ್ಳರು ಅಪಹರಿಸಿದ್ದಾರೆ. ಒಂದು ವಾರದ ಹಿಂದೆ ಎರಡು ಸೈಕಲ್‌ಗಳನ್ನು ನಿಲ್ಲಿಸಿ ಅವುಗಳಿಗೆ ಬೀಗ ಹಾಕಲಾಗಿತ್ತು. ಬುಧವಾರ ರಾತ್ರಿ ಯಾರೋ ಅಪರಿಚಿತ ವ್ಯಕ್ತಿಯೋರ್ವ  ರಾತ್ರಿ 12 ಗಂಟೆ ವೇಳೆಯಲ್ಲಿ ಬಂದು ಬಲಪ್ರಯೋಗದಿಂದ ಸೈಕಲ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಸೈಕಲ್  ನಿರ್ವಹಣೆ ಮಾಡುತ್ತಿರುವ ಸಾಗರ್ ಎಂಬುವರು ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರು ನಗರದ ಹಲವೆಡೆ ಡಾಕಿಂಗ್ ಹಾಬ್ ನಿರ್ಮಿಸಲಾಗಿದ್ದು, ಇದಕ್ಕೆ ಸೂಕ್ತ ಭದ್ರತೆ ಕಲ್ಪಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಎಷ್ಟು ಸೈಕಲ್ ಗಳು ಕೈತಪ್ಪಿ ಹೋಗಲಿವೆಯೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: