ಮೈಸೂರು

ಕಾಂಗ್ರೆಸ್ ವೈದ್ಯರ ವಿಭಾಗದ ವತಿಯಿಂದ ಕೋವಿಡ್ ಸಹಾಯವಾಣಿ ಬಿಡುಗಡೆ

ಮೈಸೂರು,ಏ.24:- ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ವೈದ್ಯರ ವಿಭಾಗದ ವತಿಯಿಂದ ಇಂದು ಕೋವಿಡ್ ಸಹಾಯವಾಣಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಭರತ್ ಕುಮಾರ್ ಅವರು ಮಾತನಾಡಿ ಕೆಪಿಸಿಸಿ ವೈದ್ಯರ ಘಟಕದ 080-47188000 ಈ  ನಂಬರಿಗೆ ಕರೆ ಮಾಡಿದರೆ 200ಕ್ಕೂ ಹೆಚ್ಚು ವೈದ್ಯರೂ ಕರೆ ಸ್ವೀಕರಿಸಲು ತಯಾರಿರುತ್ತಾರೆ.ಯಾವ ವಿಧದ ಸಮಸ್ಯೆ ಎಂದು ತಿಳಿದೊಡನೆ ಸಂಬಂಧಪಟ್ಟ ವಿಭಾಗದ ವೈದ್ಯರಿಗೆ ಕಾಲ್ ಕನೆಕ್ಟ್ ಆಗುತ್ತದೆ ಉದಾಹರಣೆ ಕಾರ್ಡಿಯಾಲಜಿ, ನ್ಯೂರಲಾಜಿ, ಯೂರಾಲಜಿ, ಗೈನಾಕಲಜಿ, ಆಂಕಾಲಜಿ ಹೀಗೆ ಎಲ್ಲಾ ವಿಭಾಗದ ವೈದ್ಯರ ಜೊತೆ ಮಾತನಾಡಬಹುದು. ಸಾರ್ವಜನಿಕರ ಸಮಸ್ಯೆಯನ್ನು ಆಧರಿಸಿ ವೈದ್ಯರೂ ಸಲಹೆ ನೀಡಲಿದ್ದು ಅಗತ್ಯ ವಿದ್ದಲ್ಲಿ ವೀಡಿಯೋ ಕಾಲ್ ಮೂಲಕವೂ ಸಲಹೆ ಪಡೆಯಬಹುದು. ಜೊತೆಗೂಡಿ ವೈದ್ಯರುಗಳು ಔಷಧಿ ಮತ್ತಿತರ ಸಲಹೆಗಳ ಪ್ರಿಸ್ಕ್ರಿಪ್ಷನ್ ನೀಡುತ್ತಾರೆ. ಈ ಕರೆಯನ್ನು ದಿನದ 24ಗಂಟೆಗಳ ಕಾಲವೂ ಮಾಡಬಹುದು. ಇದರಿಂದ ಸಾರ್ವಜನಿಕರು  ಸದುಪಯೋಗ ಪಡೆಯಬೇಕಾಗಿ  ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಿ.ಜೆ.ವಿಜಯ್ ಕುಮಾರ್,ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ,ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ,ನಗರಾಧ್ಯಕ್ಷರಾದ ಆರ್ ಮೂರ್ತಿ,ಕೆಆರ್ ನಗರ ಕಾಂಗ್ರೆಸ್ ಮುಖಂಡರಾದ ಡಿ ರವಿಶಂಕರ್ ,ಡಾ.ಭರತ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: