ಮೈಸೂರು

ವೋಲಾ ಕ್ಯಾಬ್ ತೆರೆಯದಿರುವಂತೆ ಒತ್ತಾಯ : ಪ್ರತಿಭಟನೆ

ರೈಲು ನಿಲ್ದಾಣದಲ್ಲಿ ವೋಲಾ ಕ್ಯಾಬ್ ನಿಲುಗಡೆಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.

ಮೈಸೂರಿನ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಆಟೋಚಾಲಕರು ವೋಲಾ ಹಾಗೂ ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ರೈಲು ನಿಲ್ದಾಣದಲ್ಲಿ ವೋಲಾ ಕ್ಯಾಬ್ ತೆರೆಯಲು ರೈಲ್ವೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇದರಿಂದ ಆಟೋ ಚಾಲಕರ ಬದುಕು ಮತ್ತಷ್ಟು ದುರ್ಬರವಾಗಲಿದೆ. ಆಟೋ ಪ್ರಯಾಣಿಕರು ಕ್ಯಾಬ್ ಪಡೆಯುವ ಸಾಧ್ಯತೆ ಇರುವುದರಿಂದ ತೊಂದರೆಯುಂಟಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ನೂರಾರು ಆಟೋಚಾಲಕರು ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: