ಪ್ರಮುಖ ಸುದ್ದಿ

ವಿವಿಧ ಕಾಮಗಾರಿ : ಕಚ್ಚಾ ವಸ್ತು ಸರಬರಾಜಿಗೆ ಸ್ಪಂದನೆ

ರಾಜ್ಯ( ಮಡಿಕೇರಿ) ಏ.25 :-  ಜಿಲ್ಲೆಯಲ್ಲಿ ಕೊರೋನ ಸೋಂಕು ಸಂಬಂಧಿಸಿದಂತೆ ಈಗಾಗಲೇ ಸ್ಥಗಿತಗೊಂಡ ಕಾಮಗಾರಿ ಪ್ರಾರಂಭಿಸಲು ಸರಕಾರದಿಂದ ಅನುಮತಿ ದೊರೆತ್ತಿದೆ. ಆದರೆ ಕಾಮಗಾರಿ ಪೂರೈಸಲು ಕಚ್ಚಾ ಸಾಮಾಗ್ರಿಗಳ ಕೊರತೆ ಎದುರಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ  ಎಂ.ಪಿ.ಅಪ್ಪಚ್ಚು ರಂಜನ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದಾರೆ.

ಜಲ್ಲಿ ಎಂ.ಸ್ಯಾಂಡ್‍ನ್ನು ಜಿಲ್ಲೆಯಲ್ಲಿ ದೊರೆಯದಿರುವುದರಿಂದ ಹಾಗೂ ಕೊಡಗು ಜಿಲ್ಲೆಯಲ್ಲಿ ಕ್ರಷರ್ ಚಾಲನೆಗೆ ಅನುಮತಿ ದೊರೆಯದ ಹಿನ್ನೆಲೆ  ಜಿಲ್ಲೆಯಲ್ಲಿ ಕಚ್ಚಾ ವಸ್ತುಗಳ ಸಾಮಾಗ್ರಿಗಳಿಗೆ ಅನುಮತಿ ನೀಡಬೇಕು ಮತ್ತು ಕೊಡಗು ಗಡಿ ಭಾಗವಾದ ಪಿರಿಯಾಪಟ್ಟಣದ ತಾಲೂಕಿನಲ್ಲಿ ಎಂ.ಸ್ಯಾಂಡ್ ಮತ್ತು ಜಲ್ಲಿ ತರಲು ಅನುಮತಿ ನೀಡುವಂತೆ ಮನವಿ ಮಾಡಿದರು.

ಮುಖ್ಯ ಕಾರ್ಯದರ್ಶಿಗಳು ಈ ಬೇಡಿಕೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಎಂದು ಶಾಸಕರು ಹೇಳಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: