ಮೈಸೂರು

ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ಅನುಷ್ಠಾನಕ್ಕೆ ಜಿಲ್ಲೆಗೆ 861.63 ಲಕ್ಷ ರೂ. ಬಿಡುಗಡೆ

ಸ್ವಚ್ಛ ಭಾರತ್ ಮಿಷನ್  ಕಾರ್ಯಕ್ರಮದ  ಅನುಷ್ಠಾನಕ್ಕಾಗಿ  2016-17  ನೇ ಸಾಲಿನ  ಕೇಂದ್ರ ಹಾಗೂ ರಾಜ್ಯದ  ಪಾಲಿನ  ಅನುದಾನದಲ್ಲಿ  ಮೈಸೂರು ಜಿಲ್ಲೆಗೆ ಒಟ್ಟು  ರೂ. 861.63 ಲಕ್ಷಗಳನ್ನು  ಬಿಡುಗಡೆಯಾಗಿರುತ್ತದೆ.  ಮೈಸೂರು ತಾಲ್ಲೂಕಿನ  37 ಗ್ರಾಮ ಪಂಚಾಯತ್ ಗಳಲ್ಲಿ  ವೈಯುಕ್ತಿಕ ಗೃಹ  ಶೌಚಾಲಯ  ನಿರ್ಮಾಣ ಮಾಡಿಕೊಂಡು  ಬಳಸುತ್ತಿರುವ  ಅರ್ಹ ಫಲಾನುಭವಿಗಳಿಗೆ ಮಾರ್ಗ ಸೂಚಿಯನ್ವಯ ನಿಗದಿತ ಸಮಯದಲ್ಲಿ ಸೃಜನೆ ಮಾಡಿ  ಪ್ರೋತ್ಸಾಹ  ಧನವನ್ನು   ಫಲಾನುಭವಿಗಳ  ಖಾತೆಗೆ ಜಮಾ ಮಾಡುವಂತೆ  ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರು  ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಬಿಡುಗಡೆಯಾಗಿರುವ ಹಾಗೂ ಲಭ್ಯವಿರುವ ಅನುದಾನದಲ್ಲಿ  ವೆಚ್ಚವಾಗುವ  ಆರ್ಥಿಕ ಪ್ರಗತಿಯನ್ನು  ದಾಖಲಿಸುವುದು. ಇದುವರೆವಿಗೂ ಶೌಚಾಲಯ ಹೊಂದಿಲ್ಲದ ಕುಟುಂಬಗಳಿಗೆ ಶೌಚಾಲಯ  ನಿರ್ಮಾಣ ಮಾಡಿಕೊಂಡು ಬಳಸುವಂತೆ ಅರಿವು ಕಾರ್ಯಕ್ರಮ ಆಯೋಜಿಸಿ ಶೌಚಾಲಯ ನಿರ್ಮಾಣ ಮಾಡಿಕೊಂಡ ನಂತರ ಕೂಡಲೇ ಲಭ್ಯವಿರುವ ಅನುದಾನವನ್ನು ಸಂಬಂಧಪಟ್ಟ ಫಲಾನುಭವಿಗಳ  ಖಾತೆಗೆ  ಜಮಾ ಮಾಡಲು ಅಗತ್ಯ ಕ್ರಮವಹಿಸುವಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ (ಎಸ್.ಎನ್-ಎಸ್.ಎಚ್)

 

Leave a Reply

comments

Related Articles

error: