ಮೈಸೂರು

ಅರಣ್ಯಾಧಿಕಾರಿಗಳ‌ ಬಾಯಿ ಚಪಲ‌ ತೀರಿಸಲು ಹೋದ ಇಬ್ಬರು ಅರಣ್ಯ  ‌ಸಿಬ್ಬಂದಿಗಳು ಜಲ ಸಮಾಧಿ

ಮೈಸೂರು,ಏ.25:- ಅರಣ್ಯಾಧಿಕಾರಿಗಳ‌ ಬಾಯಿ ಚಪಲ‌ ತೀರಿಸಲು ಹೋದ ಇಬ್ಬರು ಅರಣ್ಯ  ‌ಸಿಬ್ಬಂದಿಗಳು  ಕಬಿನಿ ಹಿನ್ನೀರಿನಲ್ಲಿ ಬೋಟ್ ಮಗುಚಿ   ಜಲಸಮಾಧಿಯಾದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಎನ್.ಬೇಗೂರಿನ ಗುಂಡ್ರೆ ಅರಣ್ಯ  ವಲಯದಲ್ಲಿ ನಡೆದಿದೆ.

ಮೀನು ಹಿಡಿಯಲು ತೆರಳಿದ್ದ ವೇಳೆ ಈ ಅವಗಢ ಸಂಭವಿಸಿದ್ದು, ಕಬಿನಿ ಹಿನ್ನೀರಿನ ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ತಡರಾತ್ರಿ ಘಟನೆ ನಡೆದಿದೆ. ಹಿರಿಯ ಅಧಿಕಾರಿಗಳ‌ ಸೂಚನೆ ಮೇರೆಗೆ ಮೀನು ಹಿಡಿಯಲು ತೆರಳಿದ್ದರು. ನಾಲ್ವರ ಪೈಕಿ ಇಬ್ಬರು ಈಜಿ ದಡ ಸೇರಿದ್ದರು.

ಮೃತರನ್ನು  ಶಿವಕುಮಾರ್, ಮಹೇಶ ಎಂದು ಗುರುತಿಸಲಾಗಿದ್ದು, ಶಿವಕುಮಾರ್ ಮೃತದೇಹ ಪತ್ತೆಯಾಗಿದೆ.  ಮಹೇಶ್  ಅವರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.  ಘಟನಾ ಸ್ಥಳಕ್ಕೆ ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿಗಳು ದೌಡಾಯಿಸಿದ್ದು, ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: