ಪ್ರಮುಖ ಸುದ್ದಿಮೈಸೂರು

ಜೆಎಸ್ಎಸ್ ಮಹಿಳಾ ಕಾಲೇಜು ಮುಡಿಗೆ `ಗೋಲ್ಡ್ ಕಾಲೇಜ್’ ಶ್ರೇಣಿ

ಮೈಸೂರು,ಏ.25-ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಮೌಲ್ಯಮಾಪನ ಮಾಡಿ ನೀಡುವ ಶ್ರೇಣಿಯಲ್ಲಿ ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ಗೋಲ್ಡ್ ಕಾಲೇಜ್ ಶ್ರೇಣಿಯನ್ನು ಪಡೆದುಕೊಂಡಿದೆ.

ಜೆಎಸ್ಎಸ್ ಲಂಡನ್ ನ Quacquarelli Symonds (QS) ಸಂಸ್ಥೆಯ ಭಾರತೀಯ ಶಾಖೆ QS-IGAUGE ಸಂಸ್ಥೆಯು ದೇಶದ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಇನ್ನಿತರ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಮೌಲ್ಯಮಾಪನ ಮಾಡಿ ನೀಡುವ ಶ್ರೇಣಿಯಲ್ಲಿ ಗೋಲ್ಡ್ ಕಾಲೇಜ್ ಶ್ರೇಣಿಯನ್ನು ಪಡೆದುಕೊಂಡಿದೆ.

ಇದು ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಮೊದಲನೆಯ ಕಾಲೇಜು ಎಂಬ ವಿಶೇಷ ಹೆಗ್ಗಳಿಗೆ ಪಡೆದಿದೆ. ಇದರ ಜೊತೆಯಲ್ಲಿ ಎಜ್ಯುಕೇಷನ್ ವರ್ಲ್ಡ್ ಸಂಸ್ಥೆಯು ಏಪ್ರಿಲ್ 2020ರ ವರದಿಯಲ್ಲಿ ದೇಶದ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಒಟ್ಟು 747 ಸ್ವಾಯತ್ತ ಕಾಲೇಜುಗಳ ಮೌಲ್ಯ ಮಾಪನದಲ್ಲಿ ರಾಜ್ಯದ ಖಾಸಗಿ ಸ್ವಾಯತ್ತ ಕಾಲೇಜುಗಳಲ್ಲಿ 3ನೇ ರ್ಯಾಂಕ್ ಹಾಗೂ ರಾಷ್ಟ್ರಮಟ್ಟದಲ್ಲಿ 26ನೇ ರ್ಯಾಂಕ್ ಪಡೆದಿದೆ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: