ಮೈಸೂರು

ಅರ್ಚಕರು ಹಾಗೂ ಟಾಂಗಾ ಗಾಡಿ ಮಾಲೀಕರಿಗೆ ದಿನಸಿ ಕಿಟ್ ವಿತರಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ ಮಾದೇಶ್ ಬಳಗ

ಮೈಸೂರು,ಏ.25:- ಲಾಕ್ ಡೌನ್ ಆಗಿ ಕೊರೋನಾ ಹಾಟ್ ಸ್ಪಾಟ್ ಆಗಿರುವ ಮೈಸೂರಿನಲ್ಲಿ ಅರ್ಚಕರು ಹಾಗೂ ಟಾಂಗಾ ಗಾಡಿ ಮಾಲೀಕರು ಷಂಕಷ್ಟದಲ್ಲಿ ಸಿಲುಕಿದ್ದು, ಇಂದು  ಆಹಾರ ಪದಾರ್ಥಗಳನ್ನು ಉಚಿತವಾಗಿ ವಿತರಿಸಲಾಯಿತು.

ಕುಕ್ಕರಹಳ್ಳಿ ಕೆರೆ ಬಳಿಯ ಟಾಂಗಾ ಗಾಡಿ  ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ ಮಾದೇಶ್ ಬಳಗದ ವತಿಯಿಂದ ಏರ್ಪಡಿಸಿದ್ದ ಅಗತ್ಯ ದವಸ  ಧಾನ್ಯಗಳ ವಿತರಣೆ ಕಾರ್ಯಕ್ರಮಕ್ಕೆ  ಶಾಸಕ ಎಲ್ ನಾಗೇಂದ್ರ ಚಾಲನೆ ನೀಡಿದರು.

ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕಾಲ ಇದು , ಉಳ್ಳವರು  ಬಡವರಿಗೆ ಸಹಾಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕರು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: