ಮೈಸೂರು

ಬುದ್ಧಿಮಾಂದ್ಯರ ಆಶ್ರಮಕ್ಕೆ ನೆರವು   ನೀಡಿದ ಮಾಜಿ ಶಾಸಕ  ಎಂ ಕೆ ಸೋಮಶೇಖರ್

ಮೈಸೂರು,ಏ.25:- ಕೋವಿಡ್ 19 ಹಿನ್ನೆಲೆ  ಲಾಕ್ ಡೌನ್ ಆದ ಮೊದಲ ದಿನದಿಂದಲೂ ಅಂದರೆ ಕಳೆದ 32 ದಿನದಿಂದಲೂ ಒಂದೇ ಒಂದು ದಿನವೂ ಅಡೆತಡೆ ಇಲ್ಲದೆ ನೊಂದವರ,ನಿರ್ಗತಿಕರ,ನಿರಾಶ್ರಿತರ,ಬಡವರ,ಕೂಲಿಕಾರ್ಮಿಕರ ನೆರವಿಗೆ ದನಿಯಾಗಿ ನಿಂತಿರುವ ಜನಸ್ಪಂದನ ಟ್ರಸ್ಟ್ ಇಂದು ಮತ್ತೊಂದು ವಿಶೇಷ ಸೇವಾ ಕಾರ್ಯವನ್ನು ಮಾಡಿದೆ.

ಕೊರೋನಾ ಹಿನ್ನೆಲೆಯಲ್ಲಿ  ಮೈಸೂರಿನ ರಾಜೀವ್ ನಗರದಲ್ಲಿರುವ ನವಜೀವನ ನಿಕೇತನ ಬುದ್ಧಿಮಾಂದ್ಯರ ಆಶ್ರಮಕ್ಕೆ ಯಾರು ದಾನಿಗಳು ಸಹಾಯಹಸ್ತ ನೀಡದ ವಿಷಯ ತಿಳಿದ ಮಾಜಿ ಶಾಸಕರಾದ   ಎಂ ಕೆ ಸೋಮಶೇಖರ್ ಅವರು ತಮ್ಮ ತಂಡದೊಂದಿಗೆ ತೆರಳಿ 50 ಸಾವಿರ ರೂ. ಮೌಲ್ಯದ ದಿನಸಿ ಆಹಾರ ಪದಾರ್ಥಗಳನ್ನು ಆಶ್ರಮಕ್ಕೆ ಹಸ್ತಾಂತರಿಸಿದರು. ಈ ವೇಳೆ  ಉದ್ಯಮಿ ಬಳ್ಳಾರಿ ದಿನಕರ್,ಕಲಾವಿದ ಅಗ್ನಿ ರವಿ,ಕಾಂಗ್ರೆಸ್ ಮುಖಂಡರಾದ ಹರವೆ ಸಿದ್ದು,ವಿಶ್ವ,ಬಿಳಿಗಿರಿ ರಂಗಯ್ಯ ಹಾಗೂ ಆಶ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: