ಸುದ್ದಿ ಸಂಕ್ಷಿಪ್ತ

ಸಂಕ್ಷಿಪ್ತ ಸುದ್ದಿಗಳು – 28 September

ನಾಡಹಬ್ಬಕ್ಕೆ ತಮಿಳರ ಓಲೈಕೆ: ಕನ್ನಡ ವೇದಿಕೆ ಆಕ್ರೋಶ

ಕಾವೇರಿಯ ವಿಷಯಕ್ಕೆ ಸಂಬಂಧಿಸಿದಂತೆ ತಮಿಳೂನಾಡಿನ ಮೇಲೆ ಕನ್ನಡಿಗರ ಆಕ್ರೋಶ ತಾರಕಕ್ಕೇರಿದ್ದು, ನಾಡಹಬ್ಬ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆಯನ್ನು ನೀಡುವುದು ಬಿಟ್ಟು ದಸರಾ ಉತ್ಸವಕ್ಕೆ ತಮಿಳಿನ ದಕ್ಷಿಣ ವಲಯದ ತಂಜಾವೂರಿನ ಸಾಂಸ್ಕೃತಿಕ ಸಂಸ್ಥೆಗೆ 31 ಕಾರ್ಯಕ್ರಮಗಳನ್ನು ಮೀಸಲಾಗಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ಮೈಸೂರು ಕನ್ನಡ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಕಾವೇರಿಗಾಗಿ ತಮಿಳುನಾಡಿನ ವಿರುದ್ಧ ಹೋರಾಡಿ ತಮ್ಮ ಮೇಲೆ ಹಲವು ಮೊಕದ್ದಮೆಗಳನ್ನು ಹಾಕಿಸಿಕೊಂಡು ಕನ್ನಡಪರ ಹೋರಾಟಗಾರರು ಪರಿತಪಿಸುತ್ತಿದ್ದಾರೆ, ಇನ್ನೊಂದೆಡೆ ಕನ್ನಡ ಸಂಸ್ಕೃತಿ ಇಲಾಖೆ ತಮಿಳು ಕಲಾವಿದರಿಗೆ ಮಣೆ ಹಾಕಿರುವುದರ ರಹಸ್ಯ ಒಪ್ಪಂದ ಬಹಿರಂಗವಾಗಬೇಕು. ಕನ್ನಡ ಸಂಸ್ಕೃತಿ ಇಲಾಖೆ ತನ್ನ ನಿಲುವು ಬದಲಾಯಿಸದಿದ್ದಲ್ಲಿ  ಅದರ ವಿರುದ್ಧ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ಮೈಸೂರು ಕನ್ನಡ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ದಸರಾ ಗೊಂಬೆ ಕೂರಿಸುವ ಸ್ಪರ್ಧೆ

ರೋಟರಿ ಬೃಂದಾವನ ಮೈಸೂರು ದಸರೆಯಲ್ಲಿ ಪಾರಂಪರಿಕ ಗೊಂಬೆ ಕೂಡಿಸುವ ಸ್ಪರ್ಧೆಯನ್ನು ಮೈಸೂರು ನಗರ ನಿವಾಸಿಗಳಿಗಾಗಿ ಏರ್ಪಡಿಸಿದೆ. ಆಸಕ್ತರು ತಮ್ಮ ಹೆಸರು, ವಿಳಾಸ, ಪೋನ್ ನಂಬರುಗಳನ್ನು ಮೊ.ಸಂ.9342110537/9886054999 ಗೆ ಎಸ್.ಎಮ್.ಎಸ್. ಮೂಲಕ ಅಕ್ಟೋಬರ್ 5ರೊಳಗೆ ಕಳುಹಿಸಬಹುದು ಎಂದು ರೋಟರಿ ಬೃಂದಾವನ ಮೈಸೂರು ಅಧ್ಯಕ್ಷರು ತಿಳಿಸಿದ್ದಾರೆ.

ಸೈನ್ಸ್ ಆಶ್ರಮದಿಂದ ಮಕ್ಕಳಿಗೆ ’ಪ್ರಯೋಗ’

ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ಸೈನ್ಸ್ ಆಶ್ರಮವು ದಸರಾ ಉತ್ಸವ ಪ್ರಯುಕ್ತ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಯೋಗ  ಕಾರ್ಯಕ್ರಮವನ್ನು ಅಕ್ಟೋಬರ್ 3ರಿಂದ 6ರವರೆಗೆ ಹಮ್ಮಿಕೊಂಡಿದೆ.

ಈ ಸಂದರ್ಭ ಮೆಕಾನಿಕ್ಸ್, ರೇಖಾಗಣಿತ, ರಸಾಯನಶಾಸ್ತ್ರ ಮತ್ತು ಖಗೋಳಶಾಸ್ತ್ರಗಳ ಕುರಿತು ತಿಳಿಸಲಾಗುವುದು ಮೊದಲು ಬಂದ 30ವಿದ್ಯಾರ್ಥಿಗಳಿಗೆ ಆದ್ಯತೆ. ಸೆಪ್ಟೆಂಬರ 30ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಮೊ.ಸಂ.9980878105ನ್ನು ಸಂಪರ್ಕಿಸಬಹುದು.

ಅನಿಯಮಿತ ರಕ್ತಸ್ರಾವ: ಚಿಕಿತ್ಸೆ

ವಾಣಿ ವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್ ನಲ್ಲಿ ಸೆಪ್ಟೆಂಬರ್ 29ರಂದು ಬೆಳಿಗ್ಗೆ 10ರಿಂದ ಸಂಜೆ 8ರವರೆಗೆ ಅನಿಯಮಿತ ರಕ್ತಸ್ರಾವ, ಸ್ವರದಲ್ಲಿ ಬದಲಾವಣೆ, ಶರೀರದ ಯಾವುದಾದರೊಂದು ಭಾಗದಲ್ಲಿ ಗಡಸುತನ ಇದ್ದಲ್ಲಿ ಅವುಗಳಿಗೆ ಸೂಕ್ತ ವೈದ್ಯರಿಂದ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.0821-4259259ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: