ಮೈಸೂರು

ಆರೋಗ್ಯಕ್ಕೆ ಬಾಳೆಹಣ್ಣು ಅವಶ್ಯವಿದ್ದಂತೆ ಆಡಳಿತಕ್ಕೆ ಬಿಜೆಪಿಯ ಅವಶ್ಯಕತೆಯಿದೆ : ಎಸ್.ಎ.ರಾಮದಾಸ್

ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ, ನಾಲ್ಕು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನಲೆಯಲ್ಲಿ ಇವತ್ತು ಕೆ.ಆರ್ ಕ್ಷೇತ್ರದ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ತಿನಿಸುವುದರ ಮೂಲಕ ಸಂಭ್ರಮಾಚರಣೆ ಮಾಡಿದರು.

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರು, ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪನವರ ಪರ ಘೋಷಣೆಗಳನ್ನ ಕೂಗಿದರು. ಇದೇವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಮದಾಸ್, ಇದು ಎಲ್ಲಾ ಧರ್ಮ ಹಾಗೂ ಸಮುದಾಯದ ಗೆಲುವಾಗಿದೆ. ಮೊದಲು ಜಾತಿಯಾಧಾರಿತ ಪಕ್ಷಗಳಿಂದ ದೇಶದ ಜನರಲ್ಲಿ ಜಾತಿಯ ಒಡಕು ತುಂಬಿದ್ದರು. ಇದರಿಂದ ಜಾತಿಗೊಂದು ಪಕ್ಷಗಳು ಹುಟ್ಟಿಕೊಂಡಿದ್ದವು. ಭಾರತದಾದ್ಯಂತ ಕಾಂಗ್ರೆಸ್ ಧೂಳಿಪಟವಾಗಿ, ಬಿಜೆಪಿ‌ ಕಡೆ ಒಲವು ತೋರಿದ್ದಾರೆ. ಆರೋಗ್ಯಕ್ಕೆ ಬಾಳೆಹಣ್ಣು ಹೇಗೆ ಅವಶ್ಯಕತೆಯೋ, ಹಾಗೆ ಉತ್ತಮ ಆಡಳಿತಕ್ಕೆ ಬಿಜೆಪಿ ಪಕ್ಷ ಅವಶ್ಯಕತೆ ಎಂದು ಎಲ್ಲಾ‌ ಸಮುದಾಯದ ಜನರೇ ನಿರ್ಧಾರ ಮಾಡುತ್ತಿದ್ದಾರೆ. ಗುಜರಾತ್ ಹಾಗೂ ಕರ್ನಾಟಕದಲ್ಲೂ ಮುಂದೆ ಬಿಜೆಪಿ ಪಕ್ಷ ಅಧಿಕಾರಕ್ಕೆ‌ ಬರಲಿದೆ. ಇದಕ್ಕೆ ರಾಜ್ಯದ ಹಾಗೂ ದೇಶದ ಜನರು ಒಗ್ಗೂಡಬೇಕು ಎಂದರು.

ಈ ಸಂದರ್ಭ ಕೆ.ಆರ್. ಕ್ಷೇತ್ರದ ಅಧ್ಯಕ್ಷ ಬಿ.ಪಿ.ಮಂಜುನಾಥ್, ಜೋಗಿಮಂಜು, ಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್ ಸೇರಿದಂತೆ  ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: