ಮೈಸೂರು

  ಅಬಕಾರಿ ಅಕ್ರಮ : ಇಬ್ಬರ ಬಂಧನ

ಮೈಸೂರು,ಏ.26:-  ಕೋವಿಡ್-19 ತಡೆಗಟ್ಟುವ ಹಿನ್ನಲೆ ನಗರದಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವ ಸಮಯದಲ್ಲಿ ಏಪ್ರಿಲ್ 25 ರಂದು ರಾತ್ರಿ ಜಿಲ್ಲಾ ವಿಚಕ್ಷಣ ದಳ ಹಾಗೂ ಮೈಸೂರು ವಲಯ-3 ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವು ನಗರದ ವಿಜಯನಗರ ಮತ್ತು ರಿಂಗ್ ರಸ್ತೆ ಪ್ರದೇಶಗಳಲ್ಲಿ ಎರಡು ಪ್ರತ್ಯೇಕ ದಾಳಿ ನಡೆಸಿದೆ.

ದಾಳಿ ವೇಳೆ  ಅಕ್ರಮ ಮದ್ಯ ಸಾಗಾಣಿಕೆ ಮತ್ತು ಮಾರಾಟಕ್ಕಾಗಿ 02 ವ್ಯಕ್ತಿಗಳನ್ನು ದಸ್ತಗಿರಿ ಮಾಡಿ, ಅವರಿಂದ 16.800 ಲೀ. ಮದ್ಯ ಹಾಗೂ 01 ದ್ವಿ-ಚಕ್ರ ವಾಹವನ್ನು ವಶಪಡಿಸಿಕೊಳ್ಳಲಾಗಿದ್ದು, 02 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪ್ಪಿಸಲಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಎಂ.ಎಸ್. ಮುರುಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: