ಮೈಸೂರು

ಆಸ್ಪತ್ರೆಗಳು ಬಡವರಿಗೆ ಕೈಗೆಟುಕುವ ದರದಲ್ಲಿ ಸೇವೆ ನೀಡಬೇಕು : ಶಾಸಕ ಸೋಮಶೇಖರ್

ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪ್ರತಿಷ್ಠಿತ ಅನಘ ಆಸ್ಪತ್ರೆಯ ಮೊದಲನೇ ವರ್ಷದ ವಾರ್ಷಿಕೋತ್ಸವವನ್ನು ಶಾಸಕ‌  ಎಂ.ಕೆ.ಸೋಮಶೇಖರ್ ಉದ್ಘಾಟಿಸಿದರು.

ಬಳಿಕ  ಮಾತನಾಡಿದ ಅವರು ವೈದ್ಯ ವೃತ್ತಿ ಅತ್ಯಂತ ಪವಿತ್ರವಾದದ್ದು.  ವೈದ್ಯರ ಅಧ್ಯಯನಕ್ಕೆ ಎಂದಿಗೂ ಕೊನೆಯೆ ಇಲ್ಲ. ಹೆಚ್ಚು ಹೆಚ್ಚು ರೋಗಿಗಳನ್ನು ನೋಡಿ ಹೆಚ್ಚು ಅನುಭವ ಹೊಂದುತ್ತಾರೆ. ಸಮಾಜ ಸೇವೆಯ ನೆಪದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಪ್ರಾರಂಭವಾಗಿದ್ದು ಇತ್ತೀಚೆಗೆ ಬಡವರಿಂದ ದುಡ್ಡು ಸುಲಿಯುವ ಕೇಂದ್ರಗಳಾಗುತ್ತಿವೆ. ಹಾಗಾಗಬಾರದು. ಅದರ ಬದಲು ಬಡವರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ನೀಡುವ ಕೇಂದ್ರಗಳಾಗಬೇಕು. ಆಗ ಮಾತ್ರ ವೈದ್ಯರ ಸೇವೆ ಸಾರ್ಥಕ ಎಂದು ‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಅನಘ ಆಸ್ಪತ್ರೆಯ ನಿರ್ದೇಶಕ ವಿ.ಮಹದೇವ್, ಡಾ. ಮಹೇಶ್ ಜರ್ನೇಕರ್, ಡಾ.ಜಗನ್ನಾಥ, ಡಾ.ಸಂಗೀತ, ಡಾ, ಯೋಗೇಶ್ ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: