ಮೈಸೂರು

ಮಾ.24: ಪ್ರವರದಿಂದ ಜೂಪಿಟರ್ ಪ್ರದರ್ಶನ

ಪ್ರವರ ಆರ್ಟ್ ಸ್ಟುಡಿಯೋ ತಂಡ ‘ ಜೂಪಿಟರ್ ‘  ಕನ್ನಡ ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ ಎಂದು ನಿರ್ದೇಶನ ಹನು ರಾಮಸಂಜೀವ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಸತತ ಐದು ಯಶಸ್ವೀ ಪ್ರದರ್ಶನಗಳ ನಂತರ ಮಾರ್ಚ್ 24 ರಂದು ಸಂಜೆ 7 ಗಂಟೆಗೆ ರಂಗಾಯಣದ ವನರಂಗದಲ್ಲಿ  ನಾಟಕವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಅನುಮಾನಕರ ರೀತಿಯಲ್ಲಿ ಕೊಲೆಯಾಗುವ ಕುರಿತಂತೆ ನಾಟಕದ ಕಥೆ ಪ್ರಾರಂಭವಾಗಲಿದ್ದು, ತಲೆ ಕೆಡಿಸುವ ವಿಚಿತ್ರ ಸಂದಿಗ್ಧ ಪರಿಸ್ಥಿತಿಯ ನಡುವೆ ಪತ್ತೇದಾರ ಶರಲೇಖ ರಹಸ್ಯಗಳನ್ನು ಹೇಗೆ ಭೇದಿಸುತ್ತಾನೆ ಎಂಬುದನ್ನು ನೀವು ನಾಟಕ ನೋಡಿಯೇ ತಿಳಿದುಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಗಿರೀಶ್, ಅಭಿಷೇಕ್ ರಾವ್,  ವೆಂಕಟೇಶ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: