ಮೈಸೂರು

ನೇಯ್ಗೆ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ : ಎಂ.ಕೆ.ಸೋಮಶೇಖರ್

ನೇಯ್ಗೆ ಘಟಕಗಳ ಸ್ಥಾಪನೆ ಕುರಿತಂತೆ ಪರಿಶೀಲನೆಯ ಹಾಗೂ ಮಾಹಿತಿ ಕಲೆ ಹಾಕಲು ಶಾಸಕ ಹಾಗೂ ರೇಷ್ಮೆ ನಿಗಮ ದ ಅಧ್ಯಕ್ಷ ಎಂ.ಕೆ.ಸೋಮಶೇಖರ್ ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೆ ಘಟಕಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಸರ್ಕಾರದಿಂದ 6ಕೋಟಿ ಆರ್ಥಿಕ ಸಹಾಯ ಹಾಗೂ ನಿಗಮದಿಂದ ರೂ.2.77ಕೋಟಿರೂ. ಹಣದೊಂದಿಗೆ ಹೊಸ ರೇಷ್ಮೆ ನೇಯ್ಗೆ ಘಟಕವನ್ನು ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಸಂಪೂರ್ಣ ದೇಶೀಯ ಯಂತ್ರೋಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದ್ದು, 30ಯಂತ್ರ ಚಾಲಿತ ಮಗ್ಗಗಳು, ಪೂರಕ ಇತರ ಯಂತ್ರೋಪಕರಣಗಳಾದ ವೈಂಡಿಂಗ್, ಡಬ್ಲಿಂಗ್, ಟ್ವಿಸ್ಟಿಂಗ್, ಡಿಗಮಿಂಗ್ ಹಾಗೂ ಡೈಯಿಂಗ್ ಯಂತ್ರಗಳನ್ನು ಸ್ಥಾಪಿಸಲಾಗುವುದು. ಯೋಜನಾ ವೆಚ್ಚ ಅಂದಾಜು 8.77ಕೋಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ 6ಕೋಟಿರೂ.ಗಳ ಅನುದಾನ, ನಿಗಮದಿಂದ ಇನ್ನುಳಿದ 2.77ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು. 100ಜನರಿಗೆ ನೇರ ಉದ್ಯೋಗಾವಕಾಶ ಸಿಗಲಿದೆ ಎಂದರು.

ಇದೇ ವೇಳೆ ಅಲ್ಲಿನ ನೌಕರರು ನಮ್ಮನ್ನು ಸೇವೆಯಲ್ಲಿ ಖಾಯಂಗೊಳಿಸಿ, ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಸಾಯುವ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ತಿಳಿಸಿದ ಸೋಮಶೇಖರ್ ಅಲ್ಲಿನ ಯಂತ್ರಗಳನ್ನು ಪರಿಶೀಲಿಸಿದರು.

ಈ ಸಂದರ್ಭ ಅಧಿಕಾರಿಗಳು ಅವರ ಜೊತೆ ಇದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: