ಪ್ರಮುಖ ಸುದ್ದಿ

ಲಾಕ್ ಡೌನ್ ಆದೇಶ ಉಲ್ಲಂಘನೆ : ಮಾಲೀಕನ ವಿರುದ್ಧ ಪ್ರಕರಣ

ರಾಜ್ಯ( ಮಡಿಕೇರಿ) ಏ.27 :- ಕೊರೋನಾ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ತೋಟದ ಕೆಲಸಕ್ಕೆಂದು ಬಂದಿದ್ದ ನಾಲ್ವರು ಕೇರಳದ ಕಾರ್ಮಿಕರನ್ನು ತಮ್ಮ ಸ್ವಂತ ಊರಿಗೆ ತೆರಳುವಂತೆ ಪ್ರಚೋದನೆ ನೀಡಿದ ಆರೋಪದಡಿ ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದ ತೋಟದ ಮಾಲೀಕರೊಬ್ಬರ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಸಿ.ಬಿದ್ದಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಲಾಕ್ ಡೌನ್ ಆದೇಶ ಜಾರಿಯಲ್ಲಿರುವುದರಿಂದ ಅಂತರ್ ಜಿಲ್ಲಾ ಮತ್ತು ರಾಜ್ಯದ ಸಂಪರ್ಕವನ್ನು ನಿರ್ಬಂಧಿಸಿದ್ದರೂ ಕಾರ್ಮಿಕರನ್ನು ತೆರಳುವಂತೆ ಪ್ರಚೋದಿಸಿದ ಆರೋಪ ಮಾಲೀಕರ ಮೇಲಿದೆ.
ಅಸಹಾಯಕ ಕೇರಳ ಕಾರ್ಮಿಕರು ತೋರ ಗ್ರಾಮದ ಅರಣ್ಯದ ಮೂಲಕ ಕೇರಳಕ್ಕೆ ತೆರಳುತ್ತಿದ್ದಾಗ ಪೊಲೀಸರಿಗೆ ಮಾಹಿತಿ ದೊರೆತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಮಿಕರನ್ನು ಪತ್ತೆ ಹಚ್ಚಿ ಇದೀಗ ಕೋರೋಂಟೇನ್ ಗೆ ಒಳಪಡಿಸಲಾಗಿದೆ.
ಕೇರಳದ ಇರಿಟ್ಟಿಯ ವೆಳ್ಳಾರವಳ್ಳಿ ಪೆರಾವೂರು ಗ್ರಾಮದ ರಾಧಾಕೃಷ್ಣ (59), ಅನೀಶ್(34), ಸೆನಿಲ್(37) ಹಾಗೂ ಕಾಕೇಂಗಾಡ್ ನಿವಾಸಿ ಪ್ರಭಾಕರನ್(65) ಕೋರೋಂಟೇನ್‍ನಲ್ಲಿರುವ ಕಾರ್ಮಿಕರು.
ಕೊರೋನಾ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸದಂತೆ ಮನವಿ ಮಾಡಿರುವ ಪೊಲೀಸ್ ಇಲಾಖೆ ಕಾನೂನು ಮೀರುವ ತೋಟದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.(ಕೆಸಿಐ,ಎಸ್.ಎಚ್)

Leave a Reply

comments

Related Articles

error: