ಮೈಸೂರು

ಅನ್ನಪೂರ್ಣ  ಕ್ಯಾಟರರ್ಸ್ ಹಾಗೂ ಹೋಟೆಲ್ ಮಾಲೀಕರ ವತಿಯಿಂದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ದಿನದಿ ವಿತರಣೆ

ಮೈಸೂರು,ಏ.27:- ಅನ್ನಪೂರ್ಣ  ಕ್ಯಾಟರರ್ಸ್ ಹಾಗೂ ಹೋಟೆಲ್ ಮಾಲೀಕರ ವತಿಯಿಂದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕುಟುಂಬಕ್ಕೆ ಇಂದು ಕುವೆಂಪು ನಗರದ ಉದಯರವಿ ರಸ್ತೆಯಲ್ಲಿರುವ  ಶಾಂತಿ ಸಾಗರ್ ಕಾಂಪ್ಲೆಕ್ಸ್ ನಲ್ಲಿರುವ ಕಚೇರಿಯಲ್ಲಿ  ದಿನಸಿ ವಿತರಿಸಲಾಯಿತು.

ಅನ್ನಪೂರ್ಣ ಕ್ಯಾಟರರ್ಸ್  ಮಾಲೀಕರಾದ ದೀಪಕ್ ಮಾತನಾಡಿ ಸಂಕಷ್ಟದಲ್ಲಿರುವವರಿಗೆ ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ ಎಂದು ನಿರೀಕ್ಷಿಸುವುದು ಕಷ್ಟ. ಸಂಘ-ಸಂಸ್ಥೆಗಳು, ಆರ್ಥಿಕವಾಗಿ ಸಬಲರಾಗಿರುವವರು ದುರ್ಬಲರಿಗೆ ಉದಾರ ಮನಸ್ಸಿನ ನೆರವು ನೀಡಲು ಇದು ಸಕಾಲ. ನಾವು ಬದುಕುವ ಜೊತೆಗೆ ಮತ್ತೊಬ್ಬರಿಗೂ ಬದುಕುವ ಅವಕಾಶ ಕಲ್ಪಿಸಬೇಕು ಎಂಬ ಈ ನೆಲದ ಸಂಸ್ಕೃತಿಯನ್ನು ಪಾಲಿಸಲೇಬೇಕಾದ ಕಾಲವಿದು ಎಂದು ಹೇಳಿದರು.’ ಇದೇ ವೇಳೆ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿರುವ 40 ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ನಿರ್ದೇಶಕರಾದ ನಾರಾಯಣ್ ಹೆಗಡೆ, ಹಿರಿಯ ಸಮಾಜ ಸೇವಕರಾದ ಡಾ.ಕೆ ರಘುರಾಂ ವಾಜಪೇಯಿ ,ಉದ್ಯಮಿ ಅಪೂರ್ವ ಸುರೇಶ್ ,ಜೀವಧಾರ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಗಿರೀಶ್ ,ಶ್ರೀನಿವಾಸ್ ಪ್ರಸಾದ್ ,ಹಾಗೂ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: