ಮೈಸೂರು

ಊಟ ಇಲ್ಲದೆ ನಿರಾಶ್ರಿತರಾಗಿರುವವರಿಗೆ ಊಟ ವಿತರಿಸಿದ ಬಿವೈ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿಗಳ  ಬಳಗ

ಮೈಸೂರು,ಏ.27:- ಕಳೆದ 31 ದಿನಗಳಿಂದ ಆಹಾರ ವಿತರಣೆ ಮಾಡುತ್ತಾ ಬರುತ್ತಿರುವ   ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ   ಹಾಗೂ ಸಿಎಂ ಪುತ್ರ ಬಿವೈ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿಗಳ  ಬಳಗದವರು ಇಂದೂ ಕೂಡ  ಊಟ ಇಲ್ಲದೆ ನಿರಾಶ್ರಿತರಾಗಿರುವವರಿಗೆ  ಊಟವನ್ನು ವಿತರಣೆ ಮಾಡಿದರು.

ನಿರಾಶ್ರಿತರ ನೆರವಿಗೆ ವಿವಿಧ ಸಂಘ ಸಂಸ್ಥೆಗಳು ಮಿಡಿದಿದ್ದು  ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿಗಳ ಬಳಗದಿಂದಲೂ ಪ್ರತಿ‌ನಿತ್ಯ ಸಾವಿರಾರು ನಿರಾಶ್ರಿತರಿಗೆ ಊಟವನ್ನು ವಿತರಣೆ ಮಾಡುತ್ತಿದ್ದಾರೆ. ಸ್ವತಃ ಬಳಗದವರೇ  ಅಡುಗೆ ತಯಾರಿಸಿ ಯಾರಿಗೂ ಯಾವುದೇ ತೊಂದರೆ ಆಗದಂತೆ ಉತ್ತಮ ಗುಣಮಟ್ಟದ ಊಟ ತಯಾರಿಸಿ ಪ್ರತಿನಿತ್ಯ ನಗರದ ವಿವಿಧ ಭಾಗದಲ್ಲಿ ಇಂದು ಸಹ ಮೈಸೂರು ನಗರದ ರಸ್ತೆ ಬದಿಯ ನಿವಾಸಿಗಳಿಗೆ    ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಊಟ,ಮಾಸ್ಕ್  ಹಾಗೂ  ನೀರಿನ ಬಾಟಲ್  ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಳಗದ ಮುಖಂಡರಾದ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ  ಎಲ್.ಆರ್.ಮಹದೇವಸ್ವಾಮಿ,ಬಿಜೆಪಿ ಮಹಿಳಾ ಮುಖಂಡರಾದ    ಲಕ್ಷ್ಮೀದೇವಿ, ಶ್ಯಾಮಲಾ ಬೇಕರಿ  ಮಾಲೀಕರಾದ ಆನಂದ್, ಆರ್ ಕೆ. ನಿಖಿಲ್ .ಜಸ್ವಂತ್ .ವಕೀಲರಾದ ಪ್ರಸನ್ನ .    ಕೆ.ಎಸ್ .ನಂದೀಶ್  ,ಅರಸೀಕೆರೆ ಉಮೇಶ್,ಹರೀಶ್, ವಿನಯ್ , ಅಶೋಕ್   ಮುಂತಾದವರು  ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: