ಪ್ರಮುಖ ಸುದ್ದಿ

ಇಸ್ಪೀಟ್‌ ಆಡುತ್ತಿದ್ದ ದಾವಣಗೆರೆ ಶಿಕ್ಷಣ ಇಲಾಖೆ ಸಿಬ್ಬಂದಿಗಳು : ವರದಿ ಕೇಳಿದ ಆಯುಕ್ತರು

ರಾಜ್ಯ(ದಾವಣಗೆರೆ),ಏ.28:-  ನಗರದ‌ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಪಿ.ಬಿ.ರಸ್ತೆಯಲ್ಲಿರುವ ಬಿಲಾಲ್‌ ಕಾಂಪೌಂಡ್‌ನಲ್ಲಿ ಇಸ್ಪೀಟ್‌ ಆಡುತ್ತಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಆಯುಕ್ತ ಜಗದೀಶ್‌ ಡಿಡಿಪಿಐ ‌ಪರಮೇಶ್ವರ ಅವರಿಗೆ ಕೇಳಿದ್ದಾರೆ.

ಘಟನೆ ವಿವರ

ನಗರ ಉಪ ವಿಭಾಗದ ಡಿವೈಎಸ್ಪಿ ನಾಗೇಶ್‌ ಐತಾಳ್‌, ದಕ್ಷಿಣ ವೃತ್ತ ಸಿಪಿಐ ತಿಮ್ಮಣ್ಣ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪಿಎಸ್‌ಐ ವೀರೇಶ್‌ ನೇತೃತ್ವದಲ್ಲಿ ಶನಿವಾರ ದಾಳಿ ನಡೆಸಿ, ಇಸ್ಪೀಟ್ ಆಡುತ್ತಿದ್ದ, ಬಿಇಒ ಉತ್ತರ ವಲಯ ಕಚೇರಿ ಅಧೀಕ್ಷ ಕ ಎಚ್‌.ಎಸ್‌. ಬಸವರಾಜ, ಇದೇ ಕಚೇರಿಯ ಎಸಿಒ ಎಸ್‌. ಸೋಮಶೇಖರಪ್ಪ, ಪ್ರಥಮ ದರ್ಜೆ ಸಹಾಯಕ ಸುಧಾಕರ, ದ್ವಿತೀಯ ದರ್ಜೆ ಸಹಾಯಕ ಎಸ್‌.ಕೊಟ್ರೇಶ , ಎಸ್‌ಡಿಎ ಮಲ್ಲಿಕಾರ್ಜುನ, ಶಿಕ್ಷ ಕ ಕೆ.ಎಂ. ವೃಷಭೇಂದ್ರಪ್ಪ, ತಾಲೂಕು ಪಂಚಾಯಿತಿ ಕಚೇರಿ ಪ್ರಥಮ ದರ್ಜೆ ಸಹಾಯಕ ಎಲ್‌.ಆನಂದ , ಚಾಲಕ ಕೆ. ಹರ್ಷವರ್ಧನ ಇವರುಗಳನ್ನು ಬಂಧಿಸಿ, ಅವರಿಂದ ಇಸ್ಪೀಟ್ ಆಟಕ್ಕೆ ಬಳಸಿದ 38,150 ರೂ. ನಗದನ್ನು ವಶಪಡಿಸಿಕೊಂಡಿದ್ದರು. ಪ್ರಕರಣ ಸಂಬಂಧ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ 269, 87 ಕೆಪಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.

ವಿಷಯ ತಿಳಿದ ಆಯುಕ್ತ ಜಗದೀಶ್‌ ಪ್ರಕರಣ ಸಂಬಂಧ ಸಂಪೂರ್ಣ ವರದಿ ನೀಡಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ, ಆಯಕ್ತರ ಆದೇಶಾನುಸಾರ ಡಿಡಿಪಿಐ ಪರಮೇಶ್ವರ ಕೆಟಿಜೆನಗರ ಪೊಲೀಸ್‌ ಠಾಣೆಗೆ ಪತ್ರ ಬರೆದಿದ್ದು, ಮಾಹಿತಿ ಬಂದ ಮೇಲೆ ಅದನ್ನು ಆಯುಕ್ತರಿಗೆ ಕಳುಹಿಸಿ ಅವರ ಆದೇಶನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬಂಧಿತರನ್ನು ಕೋವಿಡ್‌-19 ಡ್ಯೂಟಿಗೆ ನೇಮಿಸಲಾಗಿತ್ತು

ಕೋವಿಡ್‌-19 ಸಂಬಂಧ ದಾವಣಗೆರೆ ಉತ್ತರಕ್ಕೆ ಅಧೀಕ್ಷಕ ಬಸವರಾಜ್‌, ದ್ವೀತಿಯ ದರ್ಜೆ ಸಹಾಯಕ ಮಲ್ಲಿಕಾರ್ಜುನ್‌ ಮಠದ್‌ ಅವರನ್ನು ನೇಮಕ ಮಾಡಲಾಗಿತ್ತು. ಇವರು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ದಾಖಲಾಗುವ ರೋಗಿಗಳ ಮಾಹಿತಿ ಪಡೆಯಬೇಕಾಗಿತ್ತು.   ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಥಮ ದರ್ಜೆ ಸಹಾಯಕ ಸುಧಾಕರ್‌, ದ್ವೀತಿಯ ದರ್ಜೆ ಸಹಾಯಕ ಕೊಟ್ರೇಶ್‌ರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವಾರ್‌ ರೂಂಗೆ ಹೆಚ್ಚುವರಿ ಸಿಬ್ಬಂದಿಗಳಾಗಿ ನಿಯೋಜಿಸಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: