ಮೈಸೂರು

ಕಾಂಗ್ರೆಸ್ ಮುಖಂಡರಿಂದ ದಿನಸಿ ವಿತರಣೆ

ಮೈಸೂರು,ಏ.28:- ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಸಿದ್ಧರಾಮಯ್ಯನವರ ಬೆಂಬಲಿಗ  ಕೆ.ಎಸ್.ಸಣ್ಣಸ್ವಾಮಿಯವರಿಂದ ಹಂಚ್ಯಾ ಗ್ರಾಮದ ಬಡ ಜನರಿಗೆ ಇಂದು ವಿಶೇಷ ಆಹಾರ ಕಿಟ್ ಅನ್ನು ವಿತರಿಸಲಾಯಿತು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೆಶಕರಾಗಿರುವ ಕೆ.ಎಸ್.ಸಣ್ಣಸ್ವಾಮಿ   ವಿಶೇಷ ಕಿಟ್ ಅನ್ನು ಕುಟುಂಬ ಸಮೇತರಾಗಿ ವಿತರಿಸಿದರು. ಈ ವೇಳೆ ಮಾತನಾಡಿದ ಅವರು ದೇಶದಾದ್ಯಂತ ಕೊರೋನಾ ಸೋಂಕು ಹರಡಿರುವುದರಿಂದ ಬಡ ಜನರಿಗೆ ನೆರವು ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕರೆಯ ಮೇರೆಗೆ ತೊಗರಿಬೇಳೆ, ರಾಗಿ ಹಿಟ್ಟು, ಗೋಧಿ ಹಿಟ್ಟು, ಸಕ್ಕರೆ, ಎಣ್ಣೆ, ಕಾಫಿ ಪುಡಿ, ಟೀ ಪುಡಿಯ ಕಿಟ್ ಅನ್ನು ಒಳಗೊಂಡ 110 ಕಿಟ್ ಅನ್ನು ವಿತರಿಸಿದ್ದೇನೆ ಎಂದರು.

ಈ ಸಂದರ್ಭ ಪುತ್ರ ಎಚ್.ಎಸ್.ಪರಮೇಶ್, ಅಳಿಯ ಎನ್. ಚೆನ್ನಕೇಶವ್ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: