ಪ್ರಮುಖ ಸುದ್ದಿಮನರಂಜನೆ

ಮತ್ತೆ ಸಹಾಯ ಹಸ್ತ ಚಾಚಿದ ಖಿಲಾಡಿ ಅಕ್ಷಯ್ ಕುಮಾರ್  :  ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ 2ಕೋಟಿರೂ. ದೇಣಿಗೆ  

ದೇಶ(ನವದೆಹಲಿ)ಏ.28:-   ಕೊರೋನಾ ವೈರಸ್ ವಿರುದ್ಧ  ಹೋರಾಟದಲ್ಲಿ ತೊಡಗಿರುವ  ದೇಶವನ್ನು ಬೆಂಬಲಿಸುತ್ತಿರುವ ಬಾಲಿವುಡ್ ನಟ  ನಟ ಅಕ್ಷಯ್ ಕುಮಾರ್ ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ ಎರಡು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ.

ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಅಕ್ಷಯ್ ಕುಮಾರ್ ಅವರ ಕೊಡುಗೆಗಾಗಿ ಧನ್ಯವಾದ ಅರ್ಪಿಸಿದ್ದಾರೆ. ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ  ಎರಡು ಕೋಟಿ ರೂಪಾಯಿಗಳನ್ನು ನೀಡಿ ಬೆಂಬಲಿಸಿದ್ದಕ್ಕಾಗಿ ಮುಂಬೈ ಪೊಲೀಸರು ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಸಿಂಗ್ ಬರೆದಿದ್ದಾರೆ. ನಿಮ್ಮ ಸಹಕಾರವು ನಗರದ ಭದ್ರತೆಗೆ ಬದ್ಧವಾಗಿರುವ ಮಹಿಳೆಯರು ಮತ್ತು ಪುರುಷ ಪೊಲೀಸ್ ಸಿಬ್ಬಂದಿಯ ಜೀವನದಲ್ಲಿ ಬಹಳ ಸಹಾಯಕವಾಗಲಿದೆ ಎಂಬುದು ಸಾಬೀತುಪಡಿಸುತ್ತದೆ ಎಂದಿದ್ದಾರೆ.

ಟ್ವೀಟ್‌ಗೆ ಪ್ರತಿಕ್ರಿಯಿಸಿರುವ  52 ವರ್ಷದ ನಟ ಅಕ್ಷಯ್ ಕುಮಾರ್  ಕೋವಿಡ್ -19 ಸೋಂಕಿಗೆ ಒಳಗಾಗಿ ಪ್ರಾಣ ಕಳೆದುಕೊಂಡ ಮುಖ್ಯ ಕಾನ್ಸಟೇಬಲ್‌ಗಳಾದ ಚಂದ್ರಕಾಂತ್ ಪೆಂಡುರ್ಕರ್ ಮತ್ತು ಸಂದೀಪ್ ಸರ್ವೆ ಅವರಿಗೆ ಗೌರವ ಸಲ್ಲಿಸಿದ್ದಾರೆ. ಕೊರೋನಾ ವಿರುದ್ಧ ಹೋರಾಡುವಾಗ ಪ್ರಾಣ ತ್ಯಾಗ ಮಾಡಿದ ಮುಂಬೈ ಪೊಲೀಸ್ ಮುಖ್ಯ  ಕಾನ್ಸಟೇಬಲ್ ಚಂದ್ರಕಾಂತ್ ಪೆಂಡುರ್ಕರ್ ಮತ್ತು ಸಂದೀಪ್ ಸುರ್ವೆ ಅವರಿಗೆ ನಾನು ವಂದಿಸುತ್ತೇನೆ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ, ನೀವೂ ಸಹ ಮಾಡುತ್ತೀರಿ ಎಂದು ಭಾವಿಸುತ್ತೇವೆ. ನಾವು ಅವರ ಕಾರಣದಿಂದ ಸುರಕ್ಷಿತ ಮತ್ತು ಜೀವಂತವಾಗಿದ್ದೇವೆ ಎಂಬುದನ್ನು ಮರೆಯಬಾರದು ಎಂದಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: