ಪ್ರಮುಖ ಸುದ್ದಿಮೈಸೂರು

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಶೇ.3 ರಷ್ಟಿದೆ: ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರು,ಏ.28-ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕೇಸ್ ಶೇ.3 ರಷ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಶೇ. 3 ರಷ್ಟಿದೆ. 3800 ನಲ್ಲಿ 89 ಪಾಸಿಟಿವ್ ಕೇಸ್ ಬಂದಿತ್ತು. ಜ್ಯುಬಿಲೆಂಟ್ ಮಾತ್ರ ಪಾಸಿಟಿವ್ ಕೇಸ್ ಜಾಸ್ತಿ ಇತ್ತು. ಅಲ್ಲಿ 1700 ರಲ್ಲಿ ಅಲ್ಲಿ 73 ಪಾಸಿಟಿವ್ ಬಂದಿತ್ತು. ಅಲ್ಲಿ ಶೇ.5 ರಷ್ಟು ಇತ್ತು. ತೀವ್ರ ಉಸಿರಾಟದ ತೊಂದರೆ (SARI) ಕೇಸ್ ನಲ್ಲಿ 300 ಟೆಸ್ಟ್ ನಲ್ಲಿ 2 ಪಾಸಿಟಿವ್ ಬಂದಿತ್ತು. ಐಎಲ್ಐ 60ಕ್ಕೂ ಹೆಚ್ಚು ಟೆಸ್ಟ್ ಮಾಡಿದ್ದೇವು. ಅದರಲ್ಲಿ ಒಂದು ಪಾಸಿಟಿವ್ ಬಂದಿಲ್ಲ. ಗರ್ಭಿಣಿಯರ ಟೆಸ್ಟ್ ಮಾಡಲಾಗಿತ್ತು. ಅವರಲ್ಲೂ ಪಾಸಿಟಿವ್ ಬಂದಿಲ್ಲ ಎಂದರು.

ಜಿಲ್ಲೆ ಸೇಫ್ ಅಂತ ಹೇಳುವುದಕ್ಕೆ ಆಗುವುದಿಲ್ಲ. ಜಿಲ್ಲೆಯ ಇವತ್ತಿನ ಸ್ಥಿತಿ ನೋಡಿದರೆ ಸ್ಥಿರವಾಗಿದೆ ಆಗಿದೆ ಅಂತ ಹೇಳಬಹುದು. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಯಾವುದೇ ಪಾಸಿಟಿವ್ ಕೇಸ್ ಇಲ್ಲದೆ ಎರಡು ವಾರ ಕಳೆದರೆ ಆರೇಂಜ್ ಜೋನ್, ಪುನಃ ಎರಡು ವಾರ ಯಾವುದೇ ಪಾಸಿಟಿವ್ ಕೇಸ್ ಬರದಿದ್ದರೆ ಗ್ರೀನ್ ಜೋನ್ ಗೆ ಬರುತ್ತೇವೆ. ಒಟ್ಟು 28 ದಿನ ಯಾವುದೇ ಪಾಸಿಟಿವ್ ಕೇಸ್ ಬರದಿದ್ದರೆ ಮೈಸೂರು ಗ್ರೀನ್ ಜೋನ್ ಎಂದು ಘೋಷಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ನಿನ್ನೆ 170 ಮಂದಿಯ ಟೆಸ್ಟ್ ಮಾಡಿದ್ದಾರೆ. ತೀವ್ರ ಉಸಿರಾಟದ ತೊಂದರೆ ಇದ್ದವರ, ಸೋಂಕಿತ ರೋಗಿಗಳ ಸಂಪರ್ಕದಲ್ಲಿದ್ದವರು ಇದ್ದರು. ಅದೆಲ್ಲ ನೆಗಟಿವ್ ಬಂದಿದೆ. ಕ್ವಾರೆಂಟೈನ್ ನಲ್ಲಿದ್ದ ಸುಮಾರು 800 ಜನರ ಟೆಸ್ಟ್ ಹಂತ ಹಂತವಾಗಿ ನಡೆಯುತ್ತಿದೆ. ನಿನ್ನೆ ಮತ್ತು ಇವತ್ತು 200 ಮಂದಿಯ ಟೆಸ್ಟ್ ನಡೆದಿದೆ. ಲ್ಯಾಬ್ ಗಳು 24 ಗಂಟೆಯೂ ಕೆಲಸ ಮಾಡುತ್ತಿದೆ. ಮಂಡ್ಯ, ಕೊಡಗಿನಿಂದ ಸ್ಯಾಂಪಲ್ ಕಳುಹಿಸುತ್ತಿದ್ದಾರೆ. ಲ್ಯಾಬ್ ನವರು ಕಷ್ಟಪಟ್ಟು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನಕ್ಕೆ 300 ಕ್ಕಿಂತ ಹೆಚ್ಚು ಟೆಸ್ಟ್ ಮಾಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಇಂದು ಏಳು ಮಂದಿ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದ್ದು, ಡಿಸ್ಚಾರ್ಜ್ ಆದಮೇಲೆ ಅಧಿಕೃತವಾಗಿ ಮಾಹಿತಿ ನೀಡಲಿದ್ದೇವೆ. ಇಂದು ಡಿಸ್ಚಾರ್ಜ್ ಆಗುತ್ತಿರುವವರ ಪೈಕಿ ನಜರ್ ಬಾದ್ ಗೆ ಸೇರಿದ ರೋಗಿ 273, 72 ವರ್ಷ ಇವರಿಗೆ ಬೇರೆ ಬೇರೆ ಖಾಯಿಲೆಗಳು ಇತ್ತು. ಇದರ ಮಧ್ಯೆ ಕೊರೊನಾ ತಗುಲಿದ್ದರಿಂದ ಏ. 14 ರಿಂದ ಸತತ ಎರಡು ವಾರಗಳವರೆಗೆ ಕೋವಿಡ್ -19  ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಇದೀಗ ಅವರು ಗುಣಮುಖರಾಗಿದ್ದಾರೆ. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಖಾಸಗಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ಗೆ ದಾಖಲಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.

ಬೇರೆ ಬೇರೆ ಖಾಯಿಲೆಗಳಿದ್ದರಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೂ ಕೂಡ ಬೆಂಗಳೂರಿನ ನಿಮಾನ್ಸ್ ನಿಂದ ಬಂದಂತಹ ಮತ್ತು ಟೆಲಿ ಮೆಡಿಸಿನ್ ಕ್ರಿಟಿಕಲ್ ಕೇರ್ ಯೂನಿಟ್ ಮಾಡಿ ಸರ್ಕಾರ ಎಲೆಕ್ಟ್ರಾನಿಕ್ಸ್ ರೌಂಡ್ ಮಾಡಿದ್ದಾರೆ. ಬೆಂಗಳೂರಿನ ವೈದ್ಯರು ನಮ್ಮ ಆಸ್ಪತ್ರೆ ವೈದ್ಯರೊಂದಿಗೆ ಪ್ರತಿ ದಿನ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಚಿಕಿತ್ಸೆ ನೀಡುವ ಪದ್ಧತಿಯನ್ನು ರಾಜ್ಯ ಸರ್ಕಾರ ತಂದಿದೆ. ಅದರಂತೆ ಚರ್ಚಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ವೆಂಟಿಲೇಷನ್ ಮಾಡುವುದು ಕೊನೆ ಹಂತದಲ್ಲಿ. ಕೆಲವು ದೇಶಗಳಲ್ಲಿ ರೋಗಿಗಳಿಗೆ ವೆಂಟಿಲೇಷನ್ ಮಾಡಿದಾಗ ಅವರ ಸ್ಥಿತಿ ಇನ್ನು ಗಂಭೀರವಾಗಿರುವುದನ್ನೂ ನೋಡಿದ್ದೇವೆ. ಹೀಗಾಗಿ ಆದಷ್ಟು ವೆಂಟಿಲೇಷನ್ ಕಡಿಮೆ ಮಾಡಿ `ಹೈ ಫ್ಲೋ ಆಕ್ಸಿಜನ್ ಥೆರಪಿ’ ಅಂತ ಮಾಸ್ಕ್ ಮೂಲಕ ಆಕ್ಸಿಜನ್ ಅನ್ನು ಹೈ ಫ್ಲೋ ನಲ್ಲಿ ಕೊಡುವ ಮೂಲಕ ಚಿಕಿತ್ಸೆ ನೀಡುವುದಕ್ಕೆ ಟೆಲಿ ಮೆಡಿಸಿನ್ ಕ್ರಿಟಿಕಲ್ ಕೇರ್ ಯೂನಿಟ್ ನವರು ಸೂಚಿಸಿದ್ದಾರೆ. ಅದೇ ರೀತಿ ನಮ್ಮಲ್ಲಿ ವೈದ್ಯರು ವೆಂಟಿಲೇಷನ್ ಬಳಸದೆ ಹೈ ಫ್ಲೋ ಆಕ್ಸಿಜನ್ ಥೆರಪಿ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳು ಗುಣಮುಖರಾಗುತ್ತಿದ್ದಾರೆ. 89 ಮಂದಿ ಸೋಂಕಿತರ ಪೈಕಿ ರೋಗಿ 273 ಅವರ ಸ್ಥಿತಿ ಗಂಭೀರವಾಗಿತ್ತು. ಅವರು ಗುಣಮುಖರಾಗಿದ್ದು, ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಇದಕ್ಕೆ ಕೋವಿಡ್ 19 ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: