ಮೈಸೂರು

ನಜರ್ ಬಾದ್ ಮೊಹಲ್ಲಾದ 400 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ಎಲ್.ನಾಗೇಂದ್ರ

ಮೈಸೂರು,ಏ.29:- ಚಾಮರಾಜ ಕ್ಷೇತ್ರದ ಬಡ ಕುಟುಂಬಗಳಿಗೆ  ಶಾಸಕ ಎಲ್ ನಾಗೇಂದ್ರ  ಇಂದು ಆಹಾರ ಧಾನ್ಯ ವಿತರಣೆ ಮಾಡಿದರು.

ವಾರ್ಡ್ ನಂಬರ್ 40 ನಜರ್ ಬಾದ್ ಮೊಹಲ್ಲಾದ 400 ಬಡ ಕುಟುಂಬಗಳಿಗೆ  ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿಯಿರುವ ಪೀಪಲ್ಸ್  ಪಾರ್ಕ್ ಕಾಲೇಜಿನ ಆವರಣದಲ್ಲಿ  ಶಾಸಕರು ತಮ್ಮ ಸ್ವಂತ ಹಣದಲ್ಲಿ ಖರೀದಿಸಲಾಗಿರುವ ಧವಸ ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು. ಈ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಕೂಲಿ ಕಾರ್ಮಿಕರು, ಅತ್ಯಂತ ಕಡುಬಡತನದ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ಸ್ಥಳೀಯ ಪಕ್ಷದ ಮುಖಂಡರ ಸಮ್ಮುಖದಲ್ಲಿ ಹಾಗೂ ಪೊಲೀಸ್ ಅಧಿಕಾರಿಗಳ/ಸಿಬ್ಬಂದಿಗಳ ನೆರವಿನೊಂದಿಗೆ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಿದರು,  ಈ ಸಂದರ್ಭ  ಚಾಮರಾಜಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ  ಸೋಮಶೇಖರ ರಾಜು  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: