ಮೈಸೂರು

ಸಂಚಾರ ಸಲಹಾ ಸಮಿತಿ ರಚನೆ : ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್

ನಗರ ಪೊಲೀಸ್ ಆಯುಕ್ತರು ಪ್ರಾರಂಭಿಸುತ್ತಿರುವ ‘ಸಂಚಾರ ಸಲಹಾ ಸಮಿತಿ’ ಗೆ ಸಾರ್ವಜನಿಕ ವಲಯದಿಂದ ಅರ್ಹ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು ನಗರದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಸಂಚಾರಕ್ಕೆ ಅಡಚಣೆಗಳಾಗಿವೆ. ಸಂಚಾರ ಪೊಲೀಸರ ಕಾರ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ಸಲಹೆ ಸೂಚನೆಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗೂ ಉತ್ತಮ ಸಂಚಾರ ನಿರ್ವಹಣೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ‘ಸಂಚಾರ ಸಲಹಾ ಸಮಿತಿ’ಯನ್ನು ರಚಿಸಲಾಗುತ್ತಿದೆ.

ಈ ಸಂಚಾರ ಸಲಹಾ ಸಮಿತಿಗೆ ಮೈಸೂರು ನಗರದ ಪೊಲೀಸ್ ಆಯುಕ್ತರು ಅಧ‍್ಯಕ್ಷರಾಗಿದ್ದು, ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ರವರು ಉಪಾಧ‍್ಯಕ್ಷರಾಗಿರುತ್ತಾರೆ. ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು, ಮೂಡಾ, ಕಾರ್ಪೋರೇಷನ್, ಕೆ.ಎಸ್.ಆರ್.ಟಿ.ಸಿ, ಆರ್.ಟಿ.ಓ, ಅಳತೆ ಮತ್ತು ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಕಾಳಜಿ ಹಾಗೂ ಅರ್ಹತೆಯುಳ್ಳ ಆಯ್ದ ಸಾರ್ವಜನಿಕ ವಲಯದ ಪ್ರತಿನಿಧಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಈ ಸಮಿತಿಯ ಸಭೆಯನ್ನು ಪ್ರತಿ ತಿಂಗಳ 2 ನೇ ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗುತ್ತದೆ. ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ಸಂಚಾರ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅಹವಾಲುಗಳು, ಸಲಹೆ-ಸೂಚನೆಗಳನ್ನು ನೀಡಬಹುದು. ಈ ಕುರಿತು ಈ ಸಮಿತಿಯಲ್ಲಿ ಪರಿಶೀಲಿಸಿ ನಿರ್ಣಯ ಕೈಗೊಳ್ಳಲಾಗುವುದು.

ಈ ಸಮಿತಿಗೆ ಸಾರ್ವಜನಿಕ ವಲಯದಿಂದ ಅರ್ಹ ಪ್ರತಿನಿಧಿಗಳು ಸದಸ್ಯ ಸ್ಥಾನಕ್ಕೆ ಅವಶ್ಯಕತೆ ಇರುತ್ತಾರೆ. ಸಿವಿಲ್ ಇಂಜಿನಿಯರಿಂಗ್, ರೋಡ್ ಸೇಫ್ಟಿ ಮತ್ತು ಟ್ರಾಫಿಕ್ ಮ್ಯಾನೇಜ್ ಮೆಂಟ್, ಅರ್ಬನ್ ಡೆವಲಪ್ ಮೆಂಟ್ ಮತ್ತು ಅರ್ಬನ್ ಟ್ರಾನ್ಸ್ ಪೋರ್ಟ್ ಸಿಸ್ಟಂ ವಿಷಯಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ ಅಥವಾ ಕಾರ್ಯಾನುಭವ ಹೊಂದಿರುವ ಹಾಗೂ ಈಗಾಗಲೇ ಯಾವುದಾದರೊಂದು ಸಂಚಾರ ಠಾಣೆಯಲ್ಲಿ ಠಾಣಾ ಮಟ್ಟದ ಸಂಚಾರ ಸಲಹಾ ಸಮಿತಿಯ ಸದಸ್ಯರಾಗಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಇದೊಂದು ಗೌರವ ಸದಸ್ಯತ್ವವಾಗಿದ್ದು, ಇದಕ್ಕೆ ಯಾವುದೇ ರೀತಿಯ ಗೌರವ ಧನ ನೀಡಲಾಗುವುದಿಲ್ಲ. ಮೇಲ್ಕಂಡ ಅರ್ಹತೆ ಹಾಗೂ ಇಚ್ಛೆಯುಳ್ಳವರು ಈ ಕೂಡಲೇ ತಮ್ಮ ಇಚ್ಛಾ ಪತ್ರವನ್ನು ಎ.ಸಿ.ಪಿ.ಸಂಚಾರ ವಿಭಾಗ ಇವರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶಿವರಾಂ ಪೇಟೆಯಲ್ಲಿರುವ ಎ.ಸಿ.ಪಿ. ಸಂಚಾರ ವಿಭಾಗ ಕಚೇರಿ ಮೊಬೈಲ್ ಸಂಖ‍್ಯೆ 9480802214, ಕಚೇರಿ ದೂರವಾಣಿ ಸಂಖ್ಯೆ 0821-2418525 ಗೆ ಸಂಪರ್ಕಿಸಲು ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ. ( ಕೆ.ಎಸ್-ಎಲ್.ಜಿ)

Leave a Reply

comments

Related Articles

error: