ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಮತ್ತೆ 9 ಮಂದಿಗೆ ಕೊರೊನಾ ಸೋಂಕು: ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆ

ಬೆಂಗಳೂರು,ಏ. 29-ರಾಜ್ಯದಲ್ಲಿ ಇಂದು ಮತ್ತೆ 9 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ.

ಕಲಬುರಗಿಯಲ್ಲಿ 8 ಹಾಗೂ ಬೆಳಗಾವಿಯಲ್ಲಿ 1 ಪ್ರಕರಣ ವರದಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಧ್ಯಾಹ್ನ 12 ಗಂಟೆಯವರೆಗಿನ ವರದಿಯ ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.

ಕಲಬುರಗಿಯಲ್ಲಿ ಇಂದು ವರದಿಯಾಗಿರುವ ಪ್ರಕರಣದಲ್ಲಿ 4.6 ವರ್ಷದ ಹೆಣ್ಣು ಮಗು, 12, 14, 17 ವರ್ಷದ ಮೂವರು ಬಾಲಕಿಯರಿಗೂ ಸೋಂಕು ತಗುಲಿದೆ. 40 ವರ್ಷದ ಮಹಿಳೆ, 20, 22, 28 ವರ್ಷದ ಯುವಕರಿಗೂ ಸೋಂಕು ತಗುಲಿದೆ.

ಇದರಲ್ಲಿ 4.6 ವರ್ಷದ ಹೆಣ್ಣು ಮಗು ರೋಗಿ 395ರ ಸಂಪರ್ಕದಲ್ಲಿತ್ತು. 12, 14, 17 ವರ್ಷದ ಬಾಲಕಿಯರು ಹಾಗೂ 40 ವರ್ಷದ ಮಹಿಳೆ ರೋಗಿ 425ರ ಸಂಪರ್ಕದಲ್ಲಿದ್ದರು. 20, 22 ವರ್ಷದ ಯುವಕರಿಬ್ಬರು ರೋಗಿ 205ರ ಸಂಪರ್ಕದಲ್ಲಿದ್ದರು. 28 ವರ್ಷದ ಯುವಕ ರೋಗಿ 515ರ ಸಂಪರ್ಕದಲ್ಲಿದ್ದರು. ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. 7 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಐವರು ಮೃತಪಟ್ಟಿದ್ದಾರೆ.

ಬೆಳಗಾವಿಯ ಹುಕ್ಕೇರಿಯಲ್ಲಿ 12 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಈತ ರೋಗಿ 293ರ ಸಂಪರ್ಕದಲ್ಲಿದ್ದ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. 6 ಮಂದಿ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಮೈಸೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 89 ಸೋಂಕಿತರ ಪೈಕಿ 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 38 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಮೈಸೂರಿನಲ್ಲಿ 7 ಮಂದಿ ಗುಣಮುಖರಾಗಿ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 31ಕ್ಕೆ ಇಳಿಕೆಯಾಗಲಿದೆ.

ನಿನ್ನೆ 8 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿ 273, 72 ವರ್ಷದ ವೃದ್ಧ, ಪಿ-140, ಪಿ-159, ಪಿ-201, ಪಿ-213, ಪಿ-216, ಪಿ-311, ಪಿ-312 ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಂಡ್ಯದಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಪ್ರಕರಣ ವರದಿಯಾಗಿಲ್ಲ. ಮಂಡ್ಯದಲ್ಲಿ ಇದುವರೆಗೂ 18 ಮಂದಿಗೆ ಸೋಂಕು ತಗುಲಿದ್ದು, ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ರೋಗಿ 185 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ರಾಜ್ಯದಲ್ಲಿ ಈವರೆಗೆ 532 ಮಂದಿ ಸೋಂಕಿತರ ಪೈಕಿ 215 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ. ಒಬ್ಬರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: