
ಮೈಸೂರು
`ಕೋವಿಡ್-19’ ಪರಿಹಾರ ನಿಧಿಗೆ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ರೂ. ದೇಣಿಗೆ
ಮೈಸೂರು,ಏ.29-ಮುಖ್ಯಮಂತ್ರಿಗಳ `ಕೋವಿಡ್-19’ ಪರಿಹಾರ ನಿಧಿಗೆ ಮಾಜಿ ಶಾಸಕ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಾಸು ಅವರು ಶಿಕ್ಷಣ ಸಂಸ್ಥೆಯ ವತಿಯಿಂದ 10 ಲಕ್ಷ ರೂ.ನ ಚೆಕ್ ಅನ್ನು ನೀಡಿದ್ದಾರೆ.
ಮೈಸೂರು ನಗರಪಾಲಿಕೆ ಆವರಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್ ಗೌಡ ಅವರು ಚೆಕ್ ಅನ್ನು ನೀಡಿದರು. ನಗರ ಪೊಲೀಸರಿಗೆ 3500 ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಾಸು, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ರತೀಶ್ ಗೌಡ, ಅವೀಶ್ ಗೌಡ, ಮಾಜಿ ನಗರಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)