ಮೈಸೂರು

ಚಾಕಲೇಟ್ ಗೆಂದು ಕೂಡಿಟ್ಟ ಹಣದಲ್ಲಿ ಮಕ್ಕಳಿಗಾಗಿ ಮಾಸ್ಕ್ ಖರೀದಿಸಿ ನೀಡಿದ ಬಾಲಕಿ

ಮೈಸೂರು,ಏ.29:- ಚಾಕಲೇಟ್ ಗೆ ಎಂದು ಅಪ್ಪ ಅಮ್ಮ  ಹಾಗೂ ಸಂಬಂಧಿಕರು ತನಗೆ ನೀಡಿದ ಹಣವನ್ನು ಕೂಡಿಟ್ಟ ಪುಟಾಣಿಯೋರ್ವಳು 500 ರೂ  ಹಣದಲ್ಲಿ ಮಕ್ಕಳಿಗೆ ಮಾಸ್ಕ್ ವಿತರಿಸಿದ್ದಾಳೆ.

ಲಿಂಗಾಂಬುದಿ ಪಾಳ್ಯದಲ್ಲಿ ಇರುವ ಅರಿವು ಶಾಲೆಯ ಮೂರನೇ ತರಗತಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ವಿದ್ಯಾರ್ಥಿನಿ ಜ್ಞಾನಿಕ ಹರೀಶ್ ಎಂಬವಳೇ ಈ ಪುಟಾಣಿ ಬಾಲಕಿಯಾಗಿದ್ದು,  ಹರೀಶ್ ನಾಯ್ಡು  ಮತ್ತು ಅರ್ಚನಾ ಅವರ ಸುಪುತ್ರಿಯಾಗಿದ್ದಾಳೆ. ಅಗ್ರಹಾರದಲ್ಲಿರುವ ಶ್ರೀರಾಮ ರಸ್ತೆಯಲ್ಲಿ ಅವರ ನಿವಾಸದ ಮುಂಭಾಗ  ಸಾಮಾಜಿಕ ಅಂತರ ಕಾಯ್ದಿರಿಸಿಕೊಂಡು 40 ಮಕ್ಕಳಿಗೆ ಮಾಸ್ಕ್ ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದು ವಿಶೇಷವಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: