ಮೈಸೂರು

ಜಿಲ್ಲೆಯಲ್ಲಿ 58ಮಂದಿ ಕೊರೋನಾ ಸೋಂಕಿತರು ಗುಣಮುಖ : 32 ಪ್ರಕರಣ ಸಕ್ರಿಯ

ಮೈಸೂರು,ಏ.30:- ಮೈಸೂರು ಜಿಲ್ಲೆಯಲ್ಲಿ ನಿನ್ನೆಯವರೆಗೆ 4762 ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ. ಈ ಪೈಕಿ 810ಮಂದಿಗೆ 14ದಿನ ಮನೆಯಲ್ಲಿಯೇ ಕಳೆಯುವಂತೆ ನಿರ್ದೇಶನ ನೀಡಲಾಗಿದೆ.

ಒಟ್ಟು 3920ಮಂದಿ ಹೋಂ ಕ್ವಾರೆಂಟೈನ್ ಯಶಸ್ವಿಯಾಗಿ ಪೂರೈಸಿದ್ದು, ಒಟ್ಟು 3499ಜನರ ರಕ್ತದ ಮಾದರಿ ಪರೀಕ್ಷಿಸಲಾಗಿದ್ದು 90ಜನರಿಗೆ ಸೋಂಕು ದೃಢಪಟ್ಟಿತ್ತು.  3409 ಮಂದಿಗೆ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ  ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ನೆಮ್ಮದಿಯ ವಿಷಯವೆಂದರೆ ನಿನ್ನೆ 7ಮಂದಿ ಸೋಂಕಿತರು ಗುಣಮುಖರಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೂ 58ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 32ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸೋಂಕು ಕಂಡ ಯುವಕ ಕೂಡ ಜ್ಯುಬಿಲಿಯೆಂಟ್ ಕಾರ್ಖಾನೆಗೆ ಸಂಬಂಧಿಸಿದವರೇ ಆಗಿದ್ದು ಆತಂಕಕ್ಕೆ ಕಾರಣವಾಗಿದೆ. ಕಾರ್ಖಾನೆಯ ಉದ್ಯೋಗಿಗಳ ಜೊತೆ ಅವರ ಕುಟುಂಬದ ಸದಸ್ಯರಿಗೂ ಸೋಂಕು ವಿಸ್ತರಣೆಯಾಗುತ್ತಲೇ ಇದೆ. 26ವರ್ಷದ ಯವಕನಿಗೆ 346ನೇ ಸೋಂಕಿತನಿಂದ ಸೋಂಕು ಹರಡಿದೆ. ಯುವಕನನ್ನು ಕೆ.ಆರ್.ಎಸ್.ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯ ಕೊರೋನಾ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: