ಮೈಸೂರು

ಕೊರೋನಾದಿಂದ ಕಂಗಾಲಾಗಿ ತತ್ತರಿಸಿದ್ದ ಕಾರ್ಮಿಕರಿಗೆ ಸಹಾಯ ಹಸ್ತ ನೀಡಿದ ಮೇಟಗಳ್ಳಿ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್  ರಾಘವೇಂದ್ರ  

ಮೈಸೂರು,ಏ.30:- ಒರಿಸ್ಸಾ ಬಿಹಾರದಿಂದ ಮೈಸೂರಿಗೆ ಬಂದು ಉಳಿದಿದ್ದ ಕೂಲಿ ಕಾರ್ಮಿಕರು ಮಾರಕ ರೋಗ ಕೊರೋನಾದಿಂದ ಕೆಲಸವಿಲ್ಲದೇ ತಮ್ಮ ದೈನಂದಿನ ಜೀವನ ಅಸ್ತವ್ಯಸ್ತವಾಗಿದ್ದ ಹಿನ್ನೆಲೆಯಲ್ಲಿ ಮತ್ತು ಆಹಾರವಿಲ್ಲದೇ ಹತಾಶರಾಗಿದ್ದ ಈ ಬಡ ಕುಟುಂಬಗಳಿಗೆ ಮೈಸೂರಿನ ಮೇಟಗಳ್ಳಿ ಠಾಣೆಯ ಕರ್ತವ್ಯ ನಿರತ ಇನ್ಸ್ ಪೆಕ್ಟರ್  ರಾಘವೆಂದ್ರ ಅವರು ತಮ್ಮ ಸಿಬ್ಬಂದಿ ವರ್ಗದವರೊಂದಿಗೆ ಮತ್ತು ತಮ್ಮ ಸ್ನೇಹಿತರೊಂದಿಗೆ ಜೊತೆಗೂಡಿ ಎ.ಸಿ.ಪಿ ಶಿವಶಂಕರ್ ಅವರ ನೇತೃತ್ವದಲ್ಲಿ ನಿರಾಶ್ರಿತರಿಗೆ 500  ಆಹಾರ ಪದಾರ್ಥಗಳ ಕಿಟ್ ನೀಡುವುದರೊಂದಿಗೆ ಕೊರೋನಾ ಮುಂಜಾಗ್ರತ ಕ್ರಮಗಳನ್ನು ತಿಳಿಸಿ ಅವರಿಗೆ ಧೈರ್ಯ ತುಂಬಿದರು. ಈ  ಒಳ್ಳೆಯ ಕಾರ್ಯಕ್ಕೆ 50 ಜನ ಮಂಗಳಮುಖಿಯರೂ ಸಹ   ಸಾಥ್ ನೀಡಿರುತ್ತಾರೆ .

ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ದಿನದ 24 ಗಂಟೆಗಳೂ ಸಹ ಸಾರ್ವಜನಿಕ ವಲಯದಲ್ಲಿ ಸೇವೆ ಮಾಡುತ್ತಿರುವುದು ಜನಸಾಮಾನ್ಯರಿಗೆ ತಿಳಿದಿರುವ ವಿಷಯವಾಗಿದೆ, ಈ ನಿಟ್ಟಿನಲ್ಲಿ ನಿರಾಶ್ರಿತರಿಗೆ ಮೇಟಗಳ್ಳಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್  ರಾಘವೇಂದ್ರ ಅವರು ಸ್ವಂತ ಹಣದಿಂದ ಸಹಾಯ ಹಸ್ತ ನೀಡಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ, ಈ ಸಂದರ್ಭದಲ್ಲಿ ಕೇನ್ಸ್ ಟೆಕ್ನಾಲಜಿ ಮತ್ತು  ರಾಘವೇಂದ್ರ ಅವರ ಸಹೋದರರು ಹಾಗೂ ಸ್ನೇಹಿತರು ಈ ಕಾರ್ಯಕ್ಕೆ ಕೈ ಜೋಡಿಸಿರುತ್ತಾರೆ.

ಈ ಸಂದರ್ಭದಲ್ಲಿ ಅವರ ಸ್ನೇಹಿತರಾದ ಪ್ರವೀಣ್ ಎಂ.ಜಿ,ಬಿ.ಎಸ್ ಜಗದೀಶ್ ಹಾಗೂ ಅವರ ಸಹೋದರರಾದ ದನಂಜಯ್ ಮತ್ತು ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: