ಮೈಸೂರು

ಗೊಂಡ್ ಚಿತ್ರಕಲೆ ತರಬೇತಿ ಕಾರ್ಯಕ್ರಮ

ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಶೈಕ್ಷಣಿಕ ಕಾರ್ಯಕ್ರಮ ಮಾಡು ಮತ್ತು ಕಲಿ ಸರಣಿಯಲ್ಲಿ ಬುಡಕಟ್ಟು ಜನರ ಈ ಕಲೆಯನ್ನು ಸ್ಥಳೀಯ ಕಲಾವಿದರಿಗೆ ಕಲಿಸುವ ಆಶಯದಲ್ಲಿ ಗೊಂಡ್ ಚಿತ್ರಕಲೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಮಧ್ಯಪ್ರದೇಶದ ಕಲಾವಿದರಾದ ನಕುಲ್ ಪುಶಮ್ ಮತ್ತು ಪ್ರೇಮವತಿ ಪುಶಮ್ ದಂಪತಿ ಮಾ.18ರಿಂದ 27ರವರೆಗೆ ಐಜಿಆರ್‍ಎಂಎಸ್‍ನಲ್ಲಿ ತರಬೇತಿ ನೀಡಲಿದ್ದಾರೆ.

ಐಜಿಆರ್‍ಎಂಎಸ್‍ನ ಪ್ರಭಾರ ಅಧಿಕಾರಿ ಜೆ. ವಿಜಯ್ ಮೋಹನ್ ಮಾತನಾಡಿ, ಮಾಡು ಮತ್ತು ಕಲಿ ಸರಣಿ ಕಾರ್ಯಕ್ರಮದ 60ನೆಯ ಭಾಗವಾಗಿ ಮಧ್ಯಪ್ರದೇಶದ ಆದಿವಾಸಿ ಗೊಂಡ್ ಚಿತ್ರಕಲೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಈ ಕಲೆ ಛತ್ತೀಸ್ಗಡ, ಗುಜರಾತಿನ ಕೆಲವು ಭಾಗಗಳಲ್ಲಿ ಕಂಡು ಬರುತ್ತದೆ. ಸ್ಥಳೀಯರಿಗೂ ಈ ಕಲೆಯ ಪರಿಚಯವಾಗಲೆಂದು ಗೊಂಡ್ ಚಿತ್ರಕಲೆ ಶಿಬಿರ ಆಯೋಜಿಸಿದ್ದೇವೆ ಎಂದು ಹೇಳಿದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: