ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಇಂದು ಮತ್ತೆ 9 ಮಂದಿಯಲ್ಲಿ ಕೊರೊನಾ ಸೋಂಕು: ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆ

ಬೆಂಗಳೂರು,ಮೇ 2-ರಾಜ್ಯದಲ್ಲಿ ಇಂದು ಮತ್ತೆ 9 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ.

ತುಮಕೂರು, ವಿಜಯಪುರದಲ್ಲಿ ತಲಾ 2, ಬೆಂಗಳೂರು, ಚಿಕ್ಕಬಳ್ಳಾಪುರ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂದು ಮಧ್ಯಾಹ್ನ 12 ಗಂಟೆಯ ವರದಿವರೆಗಿನ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.

ಮೈಸೂರಿನಲ್ಲಿ 90 ಸೋಂಕಿತರ ಪೈಕಿ ಇದುವರೆಗೂ 66 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 24 ಮಂದಿ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಪಿ-383 ಗುಣಮುಖರಾಗಿ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತುಮಕೂರಿನಲ್ಲಿ 40 ವರ್ಷದ ವ್ಯಕ್ತಿ, 29 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರಿಬ್ಬರು ರೋಗಿ 535 ಹಾಗೂ 553ರ ಸಂಪರ್ಕದಲ್ಲಿದ್ದರು. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ವಿಜಯಪುರದಲ್ಲಿ 22 ವರ್ಷದ ಯುವಕ, 45 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರಿಬ್ಬರು ರೋಗಿ 221ರ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ 32 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರು ರೋಗಿ 444ರ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ 54 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರು ರೋಗಿ 250ರ ದ್ವಿತೀಯ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಬೀದರ್ ನಲ್ಲಿ 82 ವರ್ಷದ ವೃದ್ಧನಿಗೆ ಸೋಂಕು ತಗುಲಿದ್ದು, ಇವರಿಗೆ ತೀವ್ರ ಉಸಿರಾಟದ ಸಮಸ್ಯೆ (SARI) ಇದೆ. ಇದರಿಂದ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಬೆಳಗಾವಿಯಲ್ಲಿ 23 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಇವರು ರೋಗಿ 128ರ ದ್ವಿತೀಯ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.

ಬಾಲಗಕೋಟೆಯ ಜಮಖಂಡಿಯಲ್ಲಿ 45 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರು ರೋಗಿ 381ರ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

ಇನ್ನು ನಿನ್ನೆ ರಾಜ್ಯದಲ್ಲಿ ಮಧ್ಯಾಹ್ನದವರೆಗೆ 11 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಸಂಜೆ ವೇಳೆಗೆ ಒಟ್ಟಾರೆ 24 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಿಂದ ನಿನ್ನೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿತ್ತು.

ನಿನ್ನೆ ಮಂಡ್ಯದಲ್ಲಿ 8, ದಾವಣಗೆರೆಯಲ್ಲಿ 6, ಬೆಳಗಾವಿಯಲ್ಲಿ 3, ದಕ್ಷಿಣ ಕನ್ನಡ ಹಾಗೂ ಕಲಬುರಗಿಯಲ್ಲಿ ತಲಾ 2, ಚಿಕ್ಕಬಳ್ಳಾಪುರ, ವಿಜಯಪುರ, ಧಾರವಾಡದಲ್ಲಿ ತಲಾ 1 ಪ್ರಕರಣ ವರದಿಯಾಗಿತ್ತು.

ಅಲ್ಲದೆ ನಿನ್ನೆ ರಾಜ್ಯದಲ್ಲಿ 22 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಪೈಕಿ ಬೆಂಗಳೂರು ನಗರದಲ್ಲಿ 8, ವಿಜಯಪುರದಲ್ಲಿ 5, ಕಲಬುರಗಿಯಲ್ಲಿ 4, ಬಳ್ಳಾರಿಯಲ್ಲಿ 2, ಮೈಸೂರು, ಗದಗ, ಕಾರವಾರದಲ್ಲಿ ತಲಾ 1 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇನ್ನು ನಿನ್ನೆ ರಾಜ್ಯದಲ್ಲಿ ಮೂವರು ಮೃತಪಟ್ಟಿದ್ದಾರೆ. ಪಿ-556, ಪಿ-590, ಪಿ-557 ಮೃತಪಟ್ಟವರಾಗಿದ್ದಾರೆ. ಪಿ-556, 69 ವರ್ಷದ ವ್ಯಕ್ತಿ ದಾವರಣಗೆರೆ ಜಿಲ್ಲೆಯ ನಿವಾಸಿಯಾಗಿದ್ದು, ತೀವ್ರತರ ಉಸಿರಾಟದ ತೊಂದರೆ ಹಾಗೂ ದೀರ್ಘಕಾಲೀನ ಮಧುಮೇಹ ಮತ್ತು ಹೃದಯ ಖಾಯಿಲೆಯ ಹಿನ್ನೆಲೆಯೊಂದಿಗೆ ಏ. 28 ರಂದು ಕೋವಿಡ್ 19 ಆಸ್ಪತ್ರೆಗೆ ದಾಖಲಾಗಿದ್ದರು. ಮೇ 1 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಿ-590, 82 ವರ್ಷದ ವೃದ್ಧ ಬೀದರ್ ಜಿಲ್ಲೆಯ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಏ.27  ರಂದು ಕೋವಿಡ್ 19 ಆಸ್ಪತ್ರೆಗೆ ದಾಖಲಾಗಿದ್ದರು. ಏ. 28 ರಂದು ನಿಧನರಾಗಿದ್ದಾರೆ. ಇವರ ಕೋವಿಡ್ 19 ಪರೀಕ್ಷೆಯ ವರದಿಯು ಮೇ 1 ರಂದು ಖಚಿತವಾಗಿದೆ.

ಪಿ-557, 63 ವರ್ಷದ ವ್ಯಕ್ತಿ ಬೆಂಗಳೂರು ನಿವಾಸಿಯಾಗಿದ್ದು, ದೀರ್ಘಕಾಲೀನ ಮಧುಮೇಹ ಹಾಗೂ ಮೂತ್ರಪಿಂಡ ವೈಫಲ್ಯತೆ ಹಿನ್ನೆಲೆಯಲ್ಲಿ ಇವರು ಡಯಾಲಸಿಸ್ ಸೇವೆ ಪಡೆಯುತ್ತಿದ್ದು, Multiple Myeloma ದಿಂದ ಬಳಲುತ್ತಿದ್ದು, ಕಿಮೋ ಥೆರಪಿ ಪಡೆಯುತ್ತಿದ್ದರು. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಏ. 30 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಜ್ಯದಲ್ಲಿ 598 ಸೋಂಕಿತರ ಪೈಕಿ ಇದುವರೆಗೂ 25 ಮಂದಿ ಮೃತಪಟ್ಟಿದ್ದು, 255 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. (ಎಂ.ಎನ್)

Leave a Reply

comments

Related Articles

error: