ಮೈಸೂರು

ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಫೆಡರೇಶನ್ ನಿಂದ ದಿನಸಿ ಕಿಟ್ ವಿತರಣೆ

ಮೈಸೂರು,ಮೇ.2:- ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಫೆಡರೇಶನ್ ಹಾಗೂ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಕೋವಿಡ್-19 ಕಾರಣದಿಂದ ಆದ ಲಾಕ್ ಡೌನ್ ನಿಂದಾಗಿ ತೊಂದರೆಯನ್ನು ಅನುಭವಿಸುತ್ತಿರುವ ಆಶಾ ಕಾರ್ಯಕರ್ತರು, ಅಂಗವಿಕಲರು, ಆಟೋ ಚಾಲಕರು ಹಾಗೂ ವಲಸಿಗರಿಗೆ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.

ಇಂದು  ಮೈಸೂರು ನಗರಪಾಲಿಕೆಯ ಹಿಂಭಾಗದಲ್ಲಿರುವ ದಳವಾಯಿ ಶಾಲೆಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮೈಸೂರು ವಲಯದ ಉಪವಿಭಾಗಾಧಿಕಾರಿ ವೆಂಕಟರಾಜು ಭಾಗವಹಿಸಿದ್ದರು. ಈ ಸಂದರ್ಭ ಕಾರ್ಯದರ್ಶಿ ಬಾಲಕೃಷ್ಣ. ಹೆಚ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: