ದೇಶ

ನಟಿ ಐಶ್ವರ್ಯಾ ರೈಗೆ ಪಿತೃ ವಿಯೋಗ

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ತಂದೆ ಕೃಷ್ಣರಾಜ್ ರೈ (78) ಅವರು ಶನಿವಾರ ಮುಂಬೈಯ ಬಾಂದ್ರಾ ಪಶ್ಚಿಮದ ಲೀಲಾವತಿ ಅಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.

ಕೃಷ್ಣರಾಜ್ ಅವರು ಮಂಗಳೂರಿನ ಕೌಡೂರು ಮೂಲದವರಾಗಿದ್ದಾರೆ. ಎರಡು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಅವರಿಗೆ ಪತ್ನಿ , ಮಗಳು, ಮಗ ಮತ್ತು ಮೊಮ್ಮಗಳು ಇದ್ದಾರೆ.

Leave a Reply

comments

Related Articles

error: