ಮೈಸೂರು

ಬಡಕಾರ್ಮಿಕರು,ಮನೆಗೆಲಸದ ಮಹಿಳೆಯರಿಗೆ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ದಿನಸಿ ವಿತರಣೆ

ಮೈಸೂರು,ಮೇ.2:- ಕೋವಿಡ್ 19 ಹಿನ್ನೆಲೆ ಚಾಮರಾಜ ವಿಧಾನಸಭಾ ಕ್ಷೇತ್ರದ ಚಾಮರಾಜ ಜೋಡಿ ರಸ್ತೆಯ ಕುರುಬಗೇರಿಯ ಬಡಕಾರ್ಮಿಕರು,ಮನೆಗೆಲಸದ ಮಹಿಳೆಯರಿಗೆ ಸಿದ್ದರಾಮಯ್ಯನವರ ಅಭಿಮಾನಿ ಹಾಗೂ ವಾರ್ಡ್ ನಂಬರ್  23ರ ಪರಾಜಿತ ಅಭ್ಯರ್ಥಿ ರಾಜೀವ್ ಸ್ನೇಹಬಳಗದ ವತಿಯಿಂದ ಆಹಾರ ದಿನಸಿ ಪದಾರ್ಥಗಳ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್,ಕಾಂಗ್ರೆಸ್ ಮುಖಂಡರಾದ ಕೆ ಹರೀಶ್ ಗೌಡ,ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ,ಪಾಲಿಕೆ ಸದಸ್ಯ ಜೆ ಗೋಪಿ,ಮಾಜಿ ಸದಸ್ಯ ನಾಗಭೂಷಣ್,ಬೃಂದಾ,ಕೆಂಪಣ್ಣ,ಕೆಪಿಸಿಸಿ ಸದಸ್ಯರಾದ ಶ್ರೀನಾಥ್ ಬಾಬು,ಗೋಪಾಲ್ ರಾವ್,ಚಂದ್ರು,ಮಂಜು,ಉತ್ತನಹಳ್ಳಿ ಶಿವಣ್ಣ,ರಾಜೇಶ್,ಲೋಕೇಶ್ ,ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: