ಮೈಸೂರು

ಐವರು ದರೋಡೆಕೋರರ ಬಂಧನ

ಮಂಡ್ಯಜಿಲ್ಲಾ ಪೊಲೀಸರು ಯಶಸ್ವೀಕಾರ್ಯಾಚರಣೆ ನಡೆಸುವ ಮೂಲಕ ಐವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಚೀರನಹಳ್ಳಿ ಚೇತು, ಮನು, ಮಧು, ಕೆಆಆರ್ ಎಸ್   ಚೇತು, ಅಭಿ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಮಂಡ್ಯ ಜಿಲ್ಲೆಯ ಚಿಕ್ಕಅಂಕನಹಳ್ಳಿ ಗೇಟ್ ಬಳಿ ಶನಿವಾರ ತಡರಾತ್ರಿ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.  ಬಂಧಿತರಿಂದ ಲಾಂಗ್, ದೊಣ್ಣೆ, ವಿಕೆಟ್, ಖಾರದಪುಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರಕೆರೆ ಪೊಲೀಸ್ ಠಾಣಾ ಪಿಎಸ್ಐ ಅಜರುದ್ದೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: