ಮೈಸೂರು

‘ನಿಮ್ಮ ಮನೆ ಬಾಗಿಲಿಗೆ ವೈದ್ಯರು’ ಸಂಚಾರಿ ಕ್ಲಿನಿಕ್ ಗೆ ಅಭೂತಪೂರ್ವ ಸ್ಪಂದನೆ : 7,601ಮಂದಿ ಆರೋಗ್ಯ ತಪಾಸಣೆ :ಪಾಲಿಕೆ ಮಾಹಿತಿ

ಮೈಸೂರು,ಮೇ.4:- ನಗರದಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ‘ನಿಮ್ಮ ಮನೆ ಬಾಗಿಲಿಗೆ ವೈದ್ಯರು’ ಸಂಚಾರಿ ಕ್ಲಿನಿಕ್ ಆರಂಭಿಸಲಾಗಿದ್ದು, ಜನತೆಯಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಏ.27ರಂದು ಸಂಚಾರಿ ಕ್ಲಿನಿಕ್ ಆರಂಭಗೊಂಡಿತ್ತು. ಈ ಏಳು ದಿನದ ಅವಧಿಯಲ್ಲಿ ಒಟ್ಟು 7,601ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಹಲವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದ್ದು, ಭಾನುವಾರ ಒಂದೇ ದಿನ 1,738 ಮಂದಿ ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪಾಲಿಕೆಯ 12ವೈದ್ಯಕೀಯ ತಂಡಗಳು ನಿನ್ನೆ ಕುವೆಂಪುನಗರ, ದೇವಯ್ಯನಹುಂಡಿ, ಕುವೆಂಪುನಗರ ಎಂ ಬ್ಲಾಕ್, ವಿದ್ಯಾರಣ್ಯಪುರಂ, ಅಲ್ ಕರೀಂ ಶಾಲೆ ರಾಜೀವ ನಗರ, ಕುರುಬಾರಹಳ್ಳಿ, ಇರ್ವಿನ್ ರಸ್ತೆ, ಪಡುವಾರಹಳ್ಳಿ, ವಿಜಯನಗರ, ಆಲನಹಳ್ಳಿ, ಗೌಸಿಯಾನಗರ, ನೆಹರೂ ನಗರಗಳಲ್ಲಿ ತಪಾಸಣೆ ನಡೆಸಿದೆ.

ಇಂದು ಕೆ.ಜಿ.ಕೊಪ್ಪಲು, ಅರವಿಂದ ನಗರ, ಬೃಂದಾವನ, ಯಲ್ಲಮ್ಮ ಕಾಲೋನಿ, ಶಾರದಾದೇವಿ ನಗರ, ಗಣೇಶ ನಗರ, ಸುಭಾಷ್ ನಗರ, ಉದಯಗಿರಿ, ಅಲ್ ಬದರ್ ಸರ್ಕಲ್, ಅಂಬೇಡ್ಕರ್ ಕಾಲೋನಿ, ಯರಗನಹಳ್ಳಿ, ಗೌಸಿಯಾನಗರದಲ್ಲಿ ಸಂಚಾರಿ ಕ್ಲಿನಿಕ್ ನ ವೈದ್ಯಕೀಯ ತಂಡಗಳು ತಪಾಸಣೆ ನಡೆಸಲಿವೆ ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ. (ಕೆ.ಎಸ್,ಎಸ್,ಎಚ್)

Leave a Reply

comments

Related Articles

error: