ಮೈಸೂರು

ಸಾರ್ವಜನಿಕರ ಸೇವೆಗಾಗಿ ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿದ ಶಾಸಕ ರಾಮದಾಸ್

ಮೈಸೂರು,ಮೇ.4:- ಕೋವಿಡ್ – 19 ವಿರುದ್ಧದ ಹೋರಾಟದಲ್ಲಿ ಹಗಲಿರುಳೆನ್ನದೇ ದೇಶದ ಮತ್ತು ಸಾರ್ವಜನಿಕರ ಸೇವೆಗಾಗಿ ಸಮರ್ಪಿಸಿಕೊಂಡು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ಗಳೆಲ್ಲರಿಗೂ  ಶಾಸಕ  ಹಾಗೂ ಮಾಜಿ ಸಚಿವರಾದ   ಎಸ್.ಎ. ರಾಮದಾಸ್  ಅವರು ನಿನ್ನೆ ಅಭಿನಂದನೆಗಳನ್ನು ಸಲ್ಲಿಸಿದರು.

ಲಾಕ್ ಡೌನ್ ಪ್ರಾರಂಭವಾದಾಗಿಂದಲೂ ಇಂದಿನವರೆಗೂ ಸತತವಾಗಿ ಆಹಾರವನ್ನು ಪೂರೈಸಲಾಗಿತ್ತು. ಇದಕ್ಕೆ ಪೂರಕವಾಗಿ ಯುದ್ಧದ ಸಂದರ್ಭದಲ್ಲಿ ಸೈನಿಕರು ಯಾವ ರೀತಿ ಕರ್ತವ್ಯವನ್ನು ನಿರ್ವಹಿಸುತ್ತಾರೋ ಹಾಗೇ ಅಡುಗೆ ಮನೆಯಲ್ಲಿ ಆಹಾರ ತಯಾರು ಮಾಡಲು  ಸುಮಾರು 55ಕ್ಕೂ ಹೆಚ್ಚು ಜನರ ತಂಡದ ಸದಸ್ಯರು ತಮ್ಮ‌ ಅತ್ಯಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದರು. ಇಂತವರಿಗೆ   ಅಭಿನಂದನಾ ಪತ್ರವನ್ನು ನೀಡಿ ಸನ್ಮಾನ ಮಾಡಿ ಶಾಸಕರು ಹೃದಯ ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು.

ವಿಶೇಷವಾಗಿ ಮುಂದಿನ ದಿನಗಳಲ್ಲಿ  ಈ ಸಂದರ್ಭದಲ್ಲಿ ಸೇವೆ ಸಲ್ಲಿಸಿದಂತಹ ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ,ಆಶಾ ಕಾರ್ಯಕರ್ತೆಯರು ಹಾಗೂ ನಗರಪಾಲಿಕೆ ಕಾರ್ಮಿಕರಿಗೆ ಸನ್ಮಾನ ಮತ್ತು ಅಭಿನಂದನಾ ಪತ್ರ ನೀಡುವ ಕಾರ್ಯವನ್ನು ಮಾಡಲಾಗುತ್ತದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: