ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತ ಡಾ.ಡಿ.ಬಿ. ನಟೇಶ್ ಅಧಿಕಾರ ಸ್ವೀಕಾರ : ಅಭಿನಂದನೆ

ಮೈಸೂರು,ಮೇ.5:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಡಾ.ಡಿ.ಬಿ. ನಟೇಶ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ನಿರ್ಗಮಿತ ಆಯುಕ್ತರಾದ ಪಿ.ಎಸ್.ಕಾಂತರಾಜು ಅವರು ಡಾ.ಡಿ.ಬಿ. ನಟೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಹಿಂದೆ ಪಿ.ಎಸ್.ಕಾಂತರಾಜು ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು. ಅವರ ಜಾಗಕ್ಕೆ ಗೃಹಮಂಡಳಿಯ ವ್ಯವಸ್ಥಾಪಕರಾಗಿದ್ದ ಡಾ.ಡಿ.ಬಿ.ನಟೇಶ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಅಧಿಕಾರ ಸ್ವೀಕರಿಸಿದ ಡಾ.ಡಿ.ಬಿ.ನಟೇಶ್ ಅವರನ್ನು ಇತಿಹಾಸ ತಜ್ಞರಾದ ಪ್ರೊ.ನಂಜರಾಜೇ ಅರಸ್ ,ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ನಂದೀಶ್ ಹಂಚೆ , ಕನ್ನಡ ಹೋರಾಟಗಾರರಾದ ಅರವಿಂದ್ ಶರ್ಮ ಅಭಿನಂದಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: