ಮೈಸೂರು

ಮದ್ಯ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳಬೇಡಿ : ಮಾ.ವಿ.ರಾಂಪ್ರಸಾದ್ ಕಿವಿಮಾತು

ಮೈಸೂರು,ಮೇ.4:- ಮದ್ಯ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳಬೇಡಿ ಎಂದು ಮದ್ಯ ವ್ಯಸನಿಗಳಿಗೆ ಪಾಲಿಕೆಯ ಸದಸ್ಯ   ಮಾ.ವಿ.ರಾಂಪ್ರಸಾದ್ ಕಿವಿಮಾತು ಹೇಳಿದರು.

ಮೈಸೂರಿನ ನಂಜುಮಳಿಗೆಯ ವೈನ್ ಸ್ಟೋರ್ ಮುಂದೆ ಇಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮದ್ಯಪಾನ ಕೊಳ್ಳಲು ಬರುತ್ತಿರುವವರಿಗೆ ಮಾಸ್ಕ್ ಗಳನ್ನು ಕೊಟ್ಟು , ಭಿತ್ತಿ ಪತ್ರದಲ್ಲಿ ಮದ್ಯಪಾನ ಜೀವಕ್ಕೆ ಹಾನಿಕರ. ಇರುವ ಸ್ವಲ್ಪ ಹಣವನ್ನು ಮದ್ಯ ಕುಡಿದು ಸಂಸಾರ ಹಾಳು ಮಾಡಬೇಡಿ.ಸಾರಾಯಿ ಸಹವಾಸ , ಹೆಂಡತಿ ಮಕ್ಕಳ ಉಪವಾಸ ಎಂದು ಬರೆದಿರುವ ಫಲಕ ಗಳನ್ನು  ಹಿಡಿದು ಜಾಗೃತಿ ಮೂಡಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಮಾ.ವಿ.ರಾಂ ಪ್ರಸಾದ್  ಹಲವು ದಿನಗಳ ನಂತರ ಮದ್ಯ ಸಿಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.ಮದ್ಯ ಖರೀದಿಗೆ ಹೆಚ್ಚು ಹಣ ವ್ಯಯ ಮಾಡಬೇಡಿ. ಸಂಸಾರದ ಒಳಿತಿಗೆ ಆದ್ಯತೆ ನೀಡಿ ಎಂದು ಮದ್ಯಪಾನಿಗಳಿಗೆ ಸಲಹೆ ನೀಡಿದರು. ಜನ ಉಚಿತವಾಗಿ ರೇಷನ್ ಕಿಟ್ ಗಳನ್ನೂ ಪಡೆಯಲು ನಿಲ್ಲುವಂತೆ ಮದ್ಯಪಾನ ಕೊಳ್ಳಲು ನಿಂತಿರುವುದು ದುರಾದೃಷ್ಟಕರ. ಬಹುತೇಕ ಜನರು ಕೂಲಿ ಕಾರ್ಮಿಕರು ಆರ್ಥಿಕವಾಗಿ ಹಿಂದುಳಿದವರೇ ಸಾಲಿನಲ್ಲಿ ಇದ್ದಾರೆ . 41 ದಿನದಿಂದ ಕುಡಿಯದೆ ಒಂದೇ ಸಲ ಹೆಚ್ಚಾಗಿ ಕುಡಿದರೆ ಅರೋಗ್ಯ ದಲ್ಲಿ ಏರುಪೇರಾಗಿ ಪುನಃ  ಕಷ್ಟಕ್ಕೆ ಸಿಲುಕುತ್ತೀರಿ, ಮೊದಲು ಹೆಂಡತಿ ಮಕ್ಕಳ ಊಟದ ಬಗ್ಗೆ ಯೋಚಿಸಿ. ಶಾಲೆಗಳು ಇನ್ನು ಪ್ರಾರಂಭವಾಗಲಿದೆ. ಮಕ್ಕಳ ಶಿಕ್ಷಣದ ಬಗ್ಗೆ ನಿಗಾವಹಿಸಿ ಮುಂದಿನ ಭವಿಷ್ಯ ವನ್ನು ರೂಪಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ತಿಳಿಸಿದರು.ಇದೇ ವೇಳೆ ಮಾಸ್ಕ್ ವಿತರಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿ  ಸಂದೀಪ್, ವಿಕ್ರಮ್ ಅಯ್ಯಂಗಾರ್, ಧರ್ಮೇಂದ್ರ, ಅದ್ವೈತ್ ಮುಂತಾದವರು ಇದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: