ಮೈಸೂರು

ಕುಸಿದು ಬಿದ್ದ ದೇವರಾಜ ಮಾರ್ಕೆಟ್: ಮೇಯರ್ ನೇತೃತ್ವದಲ್ಲಿ ತುರ್ತು ಸಭೆ

ತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಮೈಸೂರಿನ ದೇವರಾಜ ಮಾರುಕಟ್ಟೆ ಕುಸಿದುಬಿದ್ದಿದೆ. ಭಾನುವಾರ ಸಂಜೆ 5.30ರ ಸುಮಾರಿಗೆ ಮಾರ್ಕೆಟ್‌ನ ಒಂದು ಭಾಗ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಾರುಕಟ್ಟೆ ಕಟ್ಟಡವು ಹಳೆಯದಾಗಿದ್ದ ಕಾರಣ ನವೀಕರಣ ನಿರ್ಧಾರ ಕೈಗೊಂಡು ಇತ್ತೀಚೆಗೆ ಕೆಲಸ ಆರಂಭಿಸಲಾಗಿತ್ತು. ನವೀಕರಣ ಕಾಮಗಾರಿ ವೇಳೆ ಡ್ರಿಲ್ಲಿಂಗ್ ಮಾಡುವಾಗ ಸಾಕಷ್ಟು ಜಾಗೃತೆ ವಹಿಸಿದೇ ಇದ್ದದ್ದೇ ಕಟ್ಟಡ ಕುಸಿಯಲು ಕಾರಣ ಎನ್ನಾಲಾಗುತ್ತಿದೆ. ಧನ್ವಂತರಿ ರಸ್ತೆ ಪ್ರವೇಶದ್ವಾರದ ಒಳಭಾಗ ಕುಸಿದು ಬಿದ್ದಿದ್ದು, ಕಟ್ಟಡಕ್ಕೆ ಭಾರೀ ಹಾನಿಯಾಗಿದೆ.

HAM_6132

“ಮೈಸೂರು ಪರಂಪರೆ”  ಕಾರ‍್ಯಕ್ರಮದ ಅಡಿಯಲ್ಲಿ ಹಳೆಯ ಕಟ್ಟಡಗಳನ್ನು ರಕ್ಷಿಸಲು ನಿರ‍್ಧರಿಸಿ ಮೈಸೂರು ಅಭಿವೃದ್ಧಿಗಾಗಿ ಸಿಎಂ ನೀಡಿದ್ದ 100 ಕೋಟಿ ರೂ ಅನುದಾನದಲ್ಲಿ ಒಂಭತ್ತು ಕೋಟಿ ರೂ ವೆಚ್ಚದ ನವೀಕರಣ ಯೋಜನೆ ತಯಾರಿಸಿ ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿಯ ಕಾಂಟ್ರಾಕ್ಟ್ ಅನ್ನು ಮುಂಬೈ ಮೂಲದ ಸಾವನಿ ಕನ್‌ಸ್ಟ್ರಕ್ಷನ್ ಕಂಪನಿಗೆ ವಹಿಸಿಕೊಡಲಾಗಿತ್ತು.

ಮೈಸೂರು ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಅತ್ಯಂತ ಜನಪ್ರಿಯ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಮೈಸೂರು ಪರಂಪರೆ ಪ್ರಿಯರಲ್ಲಿ ಬೇಸರ ತರಿಸಿದೆ.

ಮೇಯರ್ ತುರ್ತು ಸಭೆ:

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಮೇಯರ್ ಬಿ.ಎಲ್. ಭೈರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಮೂಡಾ ಕಮಿಷನರ್ ಮಹೇಶ್, ಡಿಸಿಪಿ ಡಾಕ್ಟರ್ ಹೆಚ್.ಟಿ. ಶೇಖರ್, ಎಂಸಿಸಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಸುರೇಶ್ ಬಾಬು, ಎಸಿಪಿ ರಾಜಶೇಖರ್ (ದೇವರಾಜ), ಪಾಲಿಕೆ ಸದಸ್ಯ ಚಿನ್ನಿ ರವಿ, ಎಂಸಿಸಿ ಅಧಿಕಾರಿಗಳು ಹಾಜರಿದ್ದರು.

HAM_6146

Leave a Reply

comments

Related Articles

error: