ಮೈಸೂರು

ಸೊಸೆಯಿಂದ ಚಿನ್ನಾಭರಣ ಕಳುವು : ಮಾವನಿಂದ ದೂರು ದಾಖಲು

ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಸೊಸೆಯೇ ಅನ್ಯ ಪುರುಷನ ಸಹಾಯದೊಂದಿಗೆ ಕಳುವು ಮಾಡಿ ಬೇರೆಡೆಗೆ ಸಾಗಿಸಿದ್ದಾಳೆ ಎಂದು ಆರೋಪಿಸಿ ಆಕೆಯ ಮಾವ ವಿವಿಪುರಂ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಮೈಸೂರಿನ ಗೋಕುಲಂ ಮೂರನೇ ಕ್ರಾಸ್ ನಿವಾಸಿ ಎಂ.ವಿ.ಪ್ರಕಾಶ್ ಮಗ ವರದಪ್ರಭಾ ಪತ್ನಿ ಲಕ್ಷ್ಮಿಪ್ರಭಾ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈಕೆ ಒಂದು ಮಗುವಾಗುವವರೆಗೂ ಮನೆಯಲ್ಲಿಯೇ ಇದ್ದಳು. ಬಳಿಕ ಲಕ್ಷ್ಮಿಕಾಂತ ಎಂಬವನ ಜೊತೆ ಸೇರಿ ಎರಡು ತಾಳಿ ಸಹಿತ ಚಿನ್ನದ ಗುಂಡು ಕರಿಮಣಿ ಸರ, 7ರತ್ನಗಳಿಂದ ಕೂಡಿದ ಒಂದು ನೆಕ್ಲೆಸ್, ನವರತ್ನ ಪದಕ, 4 ಚಿನ್ನದ ಪದಕ ಸಹಿತ ನವರತ್ನ ಪದಕ, ಅಸಲು ವಜ್ರದ ಎಂಟು ಓಲೆ, ಆರು ಅಷ್ಟಲಕ್ಷ್ಮಿ ಬೆಳ್ಳಿ ತಟ್ಟೆ, ಸೇರಿದಂತೆ ಇತರೆ ಒಡವೆಗಳನ್ನು ಕಳುವು ಮಾಡಿದ್ದಾಳೆ ಎಂದು ದೂರು ನೀಡಿದ್ದು, ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: