ಕ್ರೀಡೆ

ವಿಶ್ವಕಪ್ ಫೈನಲ್‌  ಜರ್ಸಿಯನ್ನು ದಾನ ಮಾಡಲು ನಿರ್ಧರಿಸಿದ ನ್ಯೂಜಿಲೆಂಡ್ ಕ್ರಿಕೆಟಿಗ ಹೆನ್ರಿ ನಿಕೋಲ್ಸ್

ವಿದೇಶ(ವೆಲ್ಲಿಂಗ್ಟನ್ )ಮೇ.4:-   ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಕುಟುಂಬಗಳಿಗೆ ಸಹಾಯ ಮಾಡಲು ಐಸಿಸಿ ವಿಶ್ವಕಪ್ 2019 ರ ಫೈನಲ್‌ನಲ್ಲಿ ಧರಿಸಿರುವ ಜರ್ಸಿಯನ್ನು ದಾನ ಮಾಡಲು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಹೆನ್ರಿ ನಿಕೋಲ್ಸ್ ನಿರ್ಧರಿಸಿದ್ದಾರಂತೆ. ನಿಕೋಲ್ಸ್ ಈ ಜರ್ಸಿಯನ್ನು ಯುನಿಸೆಫ್ (ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್) ನ್ಯೂಜಿಲೆಂಡ್‌ಗೆ ದಾನ ಮಾಡಲಿದ್ದಾರೆ ಎನ್ನಲಾಗಿದೆ.

ಯುನಿಸೆಫ್ ಟ್ವೀಟ್ ಮಾಡಿ, ‘ನ್ಯೂಜಿಲೆಂಡ್ ಕ್ರಿಕೆಟಿಗ ಹೆನ್ರಿ ನಿಕೋಲ್ಸ್ ಅವರು 2019 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಳಸಿದ ಜರ್ಸಿಯನ್ನು ದಾನ ಮಾಡಲು ನಿರ್ಧರಿಸಿದ್ದು ಇದರ ಮೇಲೆ ಇಡೀ ತಂಡದ ಹಸ್ತಾಕ್ಷರವಿರಲಿದೆ. ಇದನ್ನು ನ್ಯೂಜಿಲೆಂಡ್‌ನ ಕುಟುಂಬಗಳಿಗೆ ಊಟವುಣಿಸುವ ಅದೃಷ್ಟಶಾಲಿ ದಾನಿಗೆ ನೀಡಲಾಗುತ್ತದೆ. ನೀವು ಅದನ್ನು ಪಡೆಯಲು ಬಯಸಿದರೆ ದಾನ ಮಾಡಿ ಎಂದಿದೆ.

ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ ನಿಕೋಲ್ಸ್ ಈ ಕಪ್ಪು ಜರ್ಸಿಯನ್ನು ಬಳಸಿದ್ದರು.(ಏನೆನ್ಸಿಸ್,ಎಸ್.ಎಚ್)

Leave a Reply

comments

Related Articles

error: